ಮಕ್ಕಳೆಂದರೆ ಪೋಷಕರಿಗೆ ಪ್ರಣ. ಸಣ್ಣಪುಟ್ಟ ನೋವಾದರೂ ಸಹಿಸುವುದಿಲ್ಲ. ಕಣ್ಣ ಮುಂದೆ ಆಟ ಆಡುತ್ತಿದ್ದ ಪುಟ್ಟ ಮಗಳು ಕಾಣಿಸುತ್ತಿಲ್ಲ ಅಂದ್ರೆ ಎದೆ ಛಲ್ ಅನ್ನುತ್ತದೆ. ಒಂದು ಕ್ಷಣ ತಂದೆ- ತಾಯಿಗಳ ಪ್ರಾಣವೇ ಹೋಗುತ್ತದೆ. ಬೆಂಗಳೂರಿನಲ್ಲಿ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಗಳು ಕಿಡ್ನಾಪ್ ಆಗಿದ್ದಾಳೆಂದು ಪೋಷಕರು ದೂರು ದಾಖಲಿಸಿದ್ದು, ಪೋಷಕರ ಬೇಜವಾಬ್ದಾರಿಗೆ(Parents Negligence) ಪೊಲೀಸರೇ ಶಾಕ್ ಆಗಿದ್ದಾರೆ.
ಮೀನಾ ದಂಪತಿ ನಿನ್ನೆ ರಾತ್ರಿ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ತಮ್ಮ 6 ವರ್ಷದ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಮಗಳು ಈಗ ಕಾಣಿಸುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಹೀಗಾಗಿ ಪೊಲೀಸರು ಕಿಡ್ನಾಪ್ ಕೇಸ್ ದಾಖಲಿಸಿಕೊಂಡು ಮಗುವಿನ ಹುಡುಗಾಟ ಆರಂಭಿಸಿದ್ದರು. ಕಿಡ್ನಾಪ್ ಆದ ಸ್ಥಳದ ಅಂದ್ರೆ ಕೆ.ಆರ್.ಪುರಂ ಬಳಿಯ ಜನತಾ ಕಾಲೋನಿ ಬಳಿ ಕ್ಲೂ ಹುಡುಕಲು ಪೊಲೀಸರು ತೆರಳಿದ್ದ ಸಂದರ್ಭದಲ್ಲಿಯೂ ಮನೆಯಲ್ಲಿಯೂ ಹುಡುಕಾಟ ನಡೆಸಿದ್ದರು. ಆಗ ಬಟ್ಟೆ ಕೆಳಗೆ ಮಗಳು ಮಲಗಿರುವುದು ಕಂಡುಬಂದಿದೆ.
ಮಗಳು ಮಲಗಿದಾಗ ತಾಯಿ ಒಣಗಿದ್ದ ಬಟ್ಟೆಯನ್ನು ಮಗುವಿನ ಮೇಲೆ ತಂದು ಹಾಕಿದ್ದಾರೆ. ಮಗು ಮಲಗಿ ಚೆನ್ನಾಗಿ ನಿದ್ರಿಸಿದ್ದ ಕಾರಣ ತಾಯಿ ಬಟ್ಟೆ ಹಾಕಿದ್ದರೂ ಎಚ್ಚರಗೊಡಿರಲಿಲ್ಲ. ಹೀಗಾಗಿ ಕಣ್ಣಿಗೆ ಮಗಳು ಕಾಣದ ಕಾರಣ ಗಾಬರಿಯಾದ ಪೋಷಕರು ದಾಖಲಿಸಿದ್ದಾರೆ. ಕೆಲಕಾಲ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ, ಪೊಲೀಸರು ಮಾತ್ರ ಶಾಕ್ ಆಗಿದ್ದಾರೆ.








