ಒಂದು ವಿವಾಹದ ಶಾಸ್ತ್ರಗಳು ಎಂದ್ರೆ , ಪರಸ್ಪರ ಕೈ ತಗುಲುವುದು , ಸ್ಪರ್ಷವಾಗುವುದು ಇದೆಲ್ಲವೂ ಸಹಜ.. ಅದ್ರಲ್ಲಿ ತಪ್ಪೂ ಇಲ್ಲ.. ಆದ್ರೆ ಇಲ್ಲೊಂದು ಮದುವೆ ಸಮಾರಂಭದಲ್ಲಿ ವಿಲಕ್ಷಣ ಘಟನೆ ನಡೆದಿದೆ.. ವಧು ತನ್ನ ಕೈಗೆ ವರನ ಕೈ ತಾಗಿದ್ದಕ್ಕೆ ಮದುವೆ ರದ್ದುಗೊಳಿಸಿ ಮಂಟಪದಿಂದ ಹೊರನಡೆದಿದ್ದಾಳೆ.. ಇಂತಹ ವಿಲಕ್ಷಣ ಘಟನೆ ನಡೆದಿರೋದು ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ..
ಹೌದು..! ವರ ವಧುವಿನ ಕೊರಳಿಗೆ ಹಾರ ಹಾಕುವಾಗ ಆತನ ಕೈ ವಧುವಿಗೆ ತಾಗಿದೆ. ಇಷ್ಟಕ್ಕೆ ಕೋಪಗೊಂಡ ವಧು ಮಂಟಪದಲ್ಲೇ ಜಗಳ ಶುರುಮಾಡಿದ್ದಾಳೆ.. ಅಷ್ಟಕ್ಕೆ ಸುಮ್ಮನಾಗದೇ ಮದುಉವೆಯನ್ನೇ ನಿಲ್ಲಿಸಿದ್ದಾಳೆ..
ಇದರಿಂದಾಗಿ ನೆರೆದಿದ್ದ ಅತಿಥಿಗಳಿಗೂ ಶಾಕ್ ಆಗಿದೆ. ಬೆಳ್ತಂಗಡಿ ಮೂಲದ ವರನ ಜೊತೆಗೆ ಮೂಡುಕೋಣಾಜೆ ಮೂಲದ ಯುವತಿಯ ವಿವಾಹವಾಗುತ್ತಿತ್ತು.. ನಾರಾವಿ ದೇವಾಲಯದ ಸನಿಹದ ಸಭಾಭವನದಲ್ಲಿ ಅದ್ಧೂರಿ ವಿವಾಹ ಕಾರ್ಯಕ್ರಮ ನಡೆಯುತಿತ್ತು.. ಇನ್ನೇನು ಕಾಳಿ ಕಟ್ಟುವ ಸಂದರ್ಭದಲ್ಲಿ ವಧು ಮದುವೆ ನಿಲ್ಲಿಸಿದ್ದಾಳೆ..
ಕುಟುಂಬಸ್ಥರು ಎಷ್ಟೇ ಮನವೊಲಿಸಿದ್ರೂ ಯುವತಿ ಮಾತ್ರ ಹಠ ಬಿಡದೇ ಮದುವೆ ನಿರಾಕರಿಸಿದ್ದಾಳೆ. ಬಳಿಕ ಎರೆಡೂ ಕುಟುಂಬಗಳ ನಡುವೆ ದೊಡ್ಡ ವಾಗ್ವಾದ ನಡೆದು ಇದೀಗ ಈಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದೆ.. ವೇಣೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ..
ಇನ್ನೂ ಮೂಲಗಳ ಪ್ರಕಾರ ಹೆಣ್ಣು ನೋಡಲು ಬಂದ ವರ ಬೇರೆ, ನಿಶ್ಚಿತಾರ್ಥ ಸಂದರ್ಭ ಬಂದಿದ್ದ ವರ ಬೇರೆ , ಈಗ ಮದುವೆ ಆಗುತ್ತಿರುವವನೇ ಬೇರೆ ಎಂದು ಹೇಳಲಾಗಿದೆ.. ಇದೇ ಕಾರಣಕ್ಕೆ ವಧು ಮದುವೆಯನ್ನ ತಿರಸ್ಕರಿಸಿದ್ದಾಳೆ ಎಂದೂ ಹೇಳಲಾಗ್ತಿದೆ..