ಸಂಕಷ್ಟದಲ್ಲಿ ಬ್ರೀಮ್ಸ್ ನ ಡಿ ಗ್ರೂಪ್ ನೌಕರರು : ಆರು ತಿಂಗಳಿನಿಂದ ಇಲ್ಲ ಸಂಬಳ
ಬೀದರ್ : ಆರು ತಿಂಗಳಿನಿಂದ ಸಂಬಳ ನೀಡದ ಕಾರಣ ಇಂದು ಬ್ರೀಮ್ಸ್ ನ ಡಿ ಗ್ರೂಪ್ ನೌಕರರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಇವರು ಜೀವದ ಹಂಗು ತೊರೆದು ಕೋವಿಡ್ ವಾರ್ಡನಲ್ಲಿ ಕೆಲಸ ಮಾಡುತ್ತಿದ್ದರೂ, ಸಂಬಳ ಆಗುತ್ತಿಲ್ಲ.
ಇದರಿಂದ ರೋಸಿ ಹೋದ ಡಿ ಗ್ರೂಪ್ ಮಹಿಳೆಯರು ಕೊರೊನಾ ಕಫ್ರ್ಯೂ ಇದ್ದರೂ ಕೂಡ ಬೀದರ್ ನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಸಂಬಳ ಕೊಡದಿದ್ದರೆ ಪೆಟ್ರೋಲ್ ಸುರಿದುಕೊಳ್ಳೋದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದು, ಸ್ಥಳಕ್ಕೆ ಮಹಿಳಾ ಪೊಲೀಸ್ ಠಾಣೆ ಸಿಪಿಐ ಯಶವಂತ್ ಭೇಟಿ ನೀಡಿದ್ದಾರೆ.
ಅಲ್ಲದೆ ಪ್ರತಿಭಟನಾಕಾರರ ಬಳಿ ಇದ್ದು ಪೆಟ್ರೋಲ್ ಕ್ಯಾನ್ ಕಸಿದುಕೊಂಡು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.