ಪ್ರೇಯಸಿಯ ಜೊತೆಗೆ ರಹಸ್ಯವಾಗಿ ಮೂರನೇ ಮದುವೆಯಾದ ಬ್ರಿಟನ್ ಪ್ರಧಾನಿ ಬೋರಿಸ್
ಬ್ರಿಟನ್ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಪ್ರೇಯಸಿ (33)ಕ್ಯಾರಿ ಸೈಮನ್ಸ್ ಜತೆಗೆ ರಹಸ್ಯವಾಗಿ ಮಧುವೆಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಈ ಸುದ್ದಿ ಖಚಿತವಾದಲ್ಲಿ ಇದು (56)ಬೋರಿಸ್ ಅವರಿಗೆ 3ನೇ ವಿವಾಹ.
ಶನಿವಾರ ವೆಸ್ಟ್‌ಮಿನಿಸ್ಟರ್ ಕ್ಯಾಥಡ್ರಲ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ರಹಸ್ಯವಾಗಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬ್ರಿಟನ್ ಪತ್ರಿಕೆಗಳಲ್ಲಿ ವರದಿಯಾಗಿದೆ. ಅಲ್ಲದೇ ಲಂಡನ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಗಳಿಗೆ ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಬೋರಿಸ್ ಅವರ ಕಚೇರಿಯ ಹಿರಿಯ ಸದಸ್ಯರಿಗೂ ಮಾಹಿತಿ ಇರಲಿಲ್ಲ ಎಂದು ವರದಿಯಾಗಿದೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಕ್ಯಾಥೊಲಿಕ್ ಕ್ಯಾಥಡ್ರಲ್ ಅನ್ನು ಏಕಾಏಕಿ ಮುಚ್ಚಲಾಗಿತ್ತು. ನಂತರ ಲಿಮೊಸಿನ್ ಕಾರಿನಲ್ಲಿ ಸೈಮನ್ಸ್ ಶ್ವೇತ ವರ್ಣದ ವಸ್ತ್ರ ಧರಿಸಿ 30 ನಿಮಿಷ ತಡವಾಗಿ ಬಂದರು ಎಂದು ವರದಿಗಳು ಹೇಳಿವೆ. ಕೋವಿಡ್ 19 ನಿಯಮಾವಳಿಯನ್ವಯ ಇಂಗ್ಲೆಂಡ್ ನಲ್ಲಿ ಮದುವೆಯಲ್ಲಿ 30 ಜನರಷ್ಟೇ ಪಾಲ್ಗೊಳ್ಳಲು ಅವಕಾಶವಿದೆ. ಎರಡನೇ ಪತ್ನಿ ಮರೀನಾ ವೀಲರ್ ಜತೆ ವಿವಾಹ ವಿಚ್ಚೇದನ ಪಡೆದ ಬಳಿಕ ಸೈಮನ್ಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಅಲ್ಲದೇ ಸೈಮನ್ಸ್ ಹಾಗೂ ನಿಕೋಲಸ್ ಲಿವಿಂಗ್ ಟುಗೆದರ್ ನಲ್ಲಿ ಇದ್ದರು. ಏಪ್ರಿಲ್ 2020ರಲ್ಲಿಯೇ ಸೈಮನ್ಸ್ ಪುತ್ರನಿಗೆ ಜನ್ಮ ನೀಡಿದ್ದರು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.