Britain Prime Minister | ಸೆಪ್ಟೆಂಬರ್ 5 ಕ್ಕೆ ಬ್ರಿಟನ್ ನೂತನ ಪ್ರಧಾನಿ ಘೋಷಣೆ ( Britain PM )
ಲಂಡನ್ : Britain Prime Minister ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಲಿದ್ದು, ಬ್ರಿಟನ್ ನ ಮುಂದಿನ ಪ್ರಧಾನಿ Britain Prime Minister ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಈ ನಡುವೆ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ನೂತನ ನಾಯಕನ ಹೆಸರನ್ನು ಸೆಪ್ಟಂಬರ್ ಐದರಂದು ಘೋಷಣೆ ಮಾಡಲಾಗುವುದು ಎಂದು ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥ ಗ್ರಹಾಂ ಬ್ರಾಡಿ ತಿಳಿಸಿದ್ದಾರೆ.
ಪಕ್ಷದ ನಾಯಕತ್ವ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ನಿರ್ಧಾರವಾಗಲಿದೆ.

ನಾಮ ನಿರ್ದೇಶನ ಮಾಡುವ ಅಭ್ಯರ್ಥಿಗಳು 20 ಸಂಸದರ ಬೆಂಬಲ ಹೊಂದಿರಬೇಕು.
ಬುಧವಾರ ಮೊದಲ ಸುತ್ತಿನ ಮತದಾನ ನಡೆಯಲಿದ್ದು, ಗುರುವಾರ ನಡೆಯುವ ಎರಡನೇ ಸುತ್ತಿಗೆ ಪ್ರವೇಶಿಸಲು ಅಭ್ಯರ್ಥಿಗಳು ಕನಿಷ್ಠ 30 ಮತಗಳನ್ನು ಪಡೆದಿರಬೇಕಾಗುತ್ತದೆ ಎಂದು ಗ್ರಹಾಂ ಮಾಹಿತಿ ನೀಡಿದ್ದಾರೆ.
ಅಂದಹಾಗೆ ಬ್ರಿಟನ್ ಪ್ರಧಾನಿ Britain Prime Minister ರೇಸ್ ನಲ್ಲಿ ಭಾರತ ಮೂಲದ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಕೂಡ ಕಾಣಿಸಿಕೊಂಡಿದ್ದಾರೆ.
ಇವರ ಜೊತೆಗೆ ವಾಣಿಜ್ಯ ಸಚಿವ ಪೆನ್ನಿ ಮೊರ್ಡಾಂಟ್, ವಿದೇಶಾಂಗ ಸಚಿವೆ ಲಿಜ್ ಟ್ರಸ್ ಸೇರಿದಂತೆ 11 ಮಂದಿ ಇದ್ದಾರೆ.