Queen Elizabeth II: ಬ್ರಿಟನ್ ಗೆ ಮಾತ್ರವಲ್ಲ ಇತರ 15 ದೇಶಗಳಿಗೂ ರಾಣಿಯಾಗಿದ್ದರು…
ಬ್ರಿಟನ್‌ನ ರಾಣಿ ಎಲಿಜಬೆತ್ II ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗುರುವಾರ ರಾತ್ರಿ ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಅರಮನೆಯಲ್ಲಿ ರಾಣಿ ಕೊನೆಯುಸಿರೆಳೆದರು. ರಾಣಿ ಎಲಿಜಬೆತ್ II ಬ್ರಿಟನ್ ಸಿಂಹಾಸನವನ್ನ ಅಲಂಕರಿಸಿದಾಗ ಕೇವಲ 25 ವರ್ಷ ವಯಸ್ಸಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಈ ಸಿಂಹಾಸನವನ್ನ ಆಳಿದ್ದಾರೆ.
ಏಳು ದಶಕಗಳಲ್ಲಿ 15 ಪ್ರಧಾನಿಗಳು
ಬ್ರಿಟನ್ ರಾಣಿ ಎಲಿಜಬೆತ್ II ಅವರ ಆಳ್ವಿಕೆಯ 70 ವರ್ಷಗಳಲ್ಲಿ ಬ್ರಿಟನ್‌ನ 15 ಪ್ರಧಾನ ಮಂತ್ರಿಗಳನ್ನ ನೇಮಿಸಿದ್ದಾರೆ. ರಾಣಿ ಎಲಿಜಬೆತ್ ತನ್ನ ಸಾವಿಗೆ ಎರಡು ದಿನಗಳ ಮೊದಲು ಲಿಜ್ ಟ್ರಸ್ ಅವರನ್ನ ಪ್ರಧಾನಿಯಾಗಿ ಆಯ್ಕೆ ಮಾಡಿದ್ದರು.
ಬ್ರಿಟನ್ ಮಾತ್ರವಲ್ಲ 15 ದೇಶಗಳಿಗೆ ರಾಣಿ
ಇನ್ನೊಂದು ಪ್ರಮುಖ ವಿಷಯವೆಂದರೆ ಎಲಿಜಬೆತ್ II ಬ್ರಿಟನಿನ್ನ ರಾಣಿ ಅಷ್ಟೆ ಅಲ್ಲ ಇತರ 15 ದೇಶಗಳ ಸಾಮ್ರಾಜ್ಞಿಯಾಗಿದ್ದರು. ಆದರೆ ಬ್ರಿಟನ್ ಹೊರತುಪಡಿಸಿ ಇತರ ದೇಶಗಳಲ್ಲಿ, ಅವರು ಕೇವಲ ಸಾಂಕೇತಿಕವಾಗಿ ರಾಣಿಯ ಶ್ರೇಣಿಯನ್ನ ಹೊಂದಿದ್ದರು. ಈ ದೇಶಗಳ ಸರ್ಕಾರಗಳಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲ.
ಈ ದೇಶಗಳಲ್ಲಿ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಂತಹ ಶ್ರೀಮಂತ ರಾಷ್ಟ್ರಗಳೂ ಸೇರಿವೆ. ಈ ದೇಶಗಳಲ್ಲದೆ ಜಮೈಕಾ, ಬಹಾಮಾಸ್, ಗ್ರೆನಡಾ, ಪಪುವಾ ನ್ಯೂಗಿನಿಯಾ, ಸೊಲೊಮನ್ ಐಲ್ಯಾಂಡ್ಸ್, ಟುವಾಲು, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್, ಆಂಟಿಗುವಾ ಮತ್ತು ಬಾರ್ಬುಡಾ, ಬೆಲೀಜ್, ಸೇಂಟ್ ಕಿಟ್ಸ್ ಮತ್ತು ನೆವಿಸ್ ಮತ್ತು ಬಾರ್ಬಡೋಸ್ ಸಹ ಸೇರಿವೆ.
ಆದರೆ ಬಾರ್ಬಡೋಸ್ 2021 ರಲ್ಲಿ ಈ ದೇಶಗಳಿಂದ ಬೇರ್ಪಟ್ಟಿತು. ಅವರು ತನ್ನನ್ನು ತಾನು ಹೊಸ ಗಣರಾಜ್ಯವೆಂದು ಘೋಷಿಸಿಕೊಂಡಿದ್ದಾರೆ.
10 ದಿನಗಳ ನಂತರ ಅಂತ್ಯಕ್ರಿಯೆ
ರಾಣೀ ಎಲಿಜಬೆತ್ II ಅಂತ್ಯಕ್ರಿಯೆ ಅವರ ಮರಣದ 10 ದಿನಗಳ ನಂತರ ನಡೆಯಲಿದೆ. ಇದಕ್ಕೂ ಮೊದಲು, ಅವರ ಶವಪೆಟ್ಟಿಗೆಯನ್ನು ಲಂಡನ್‌ನಿಂದ ಬಕಿಂಗ್‌ಹ್ಯಾಮ್ ಅರಮನೆಗೆ ವೆಸ್ಟ್‌ಮಿನಿಸ್ಟರ್ ಅರಮನೆಗೆ ವಿಧ್ಯುಕ್ತ ಮಾರ್ಗದ ಮೂಲಕ ಕೊಂಡೊಯ್ಯಲಾಗುತ್ತದೆ, ಅಲ್ಲಿ ರಾಣಿ ದೇಹವನ್ನ ಮೂರು ದಿನಗಳ ಕಾಲ ಇಡಲಾಗುತ್ತದೆ.
ಈ ಸಮಯದಲ್ಲಿ ಜನರು ರಾಣಿಯ ಅಂತಿಮ ದರ್ಶನ ಪಡೆಯಬಹುದು. ಈ ಸ್ಥಳ ಪ್ರತಿದಿನ 23 ಗಂಟೆಗಳ ಕಾಲ ತೆರೆದಿರುತ್ತದೆ. ಅಂತ್ಯಕ್ರಿಯೆಯ ದಿನ ರಾಷ್ಟ್ರೀಯ ಶೋಕಾಚರಣೆಯ ದಿನವಾಗಿದ್ದು, ರಾಣಿಯನ್ನು ವಿಂಡ್ಸರ್ ಕ್ಯಾಸಲ್‌ನಲ್ಲಿರುವ ಕಿಂಗ್ ಜಾರ್ಜ್ VI ಸ್ಮಾರಕ ಚಾಪೆಲ್‌ನಲ್ಲಿ ಸಮಾಧಿ ಮಾಡಲಾಗುತ್ತದೆ.