Boris Johnson Resignation: ಸಚಿವರ ಸತತ ರಾಜೀನಾಮೆ… ರಾಜೀನಾಮೆಗೆ ಪ್ರಧಾನಿ ಬೋರಿಸ್ ಓಕೆ !
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ Boris Johnson ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
ಸಚಿವರ ಸತತ ರಾಜೀನಾಮೆಯಿಂದಾಗಿ ಅವರು ಕೆಳಗಿಳಿಯಲು ಒಪ್ಪಿಕೊಂಡಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳು ಮತ್ತು ವಿವಿಧ ಮಾಧ್ಯಮ ಚಾನೆಲ್‌ಗಳು ಲೇಖನಗಳನ್ನು ಪ್ರಕಟಿಸುತ್ತಿವೆ.

ಮುಂದಿನ ಪ್ರಧಾನಿ ಆಯ್ಕೆಯಾಗುವವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿವೆ.
ಅದೇನೇ ಇರಲಿ.. ಬೋರಿಸ್ ರಾಜೀನಾಮೆ ಹಾಗೂ ಮುಂದಿನ ಪ್ರಧಾನಿ ಯಾರೆಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಬೋರಿಸ್ ಜಾನ್ಸನ್ ವಿರುದ್ಧ ಬಂಡಾಯವೆದ್ದು 54 ಸಚಿವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ.