ಒಂದೇ ಹುಡುಗಿಯನ್ನ ಪ್ರೀತಿಸಿದ ಇಬ್ಬರು ಸಹೋದರರು ಸಾವಿಗೆ ಶರಣು..!
ರಾಜಸ್ಥಾನ : ಟ್ರಯಾಂಗಲ್ ಲವ್ ಸ್ಟೋರಿಗಳಲ್ಲಿ ಕೊನೆಗೆ ಸ್ಯಾಂಡ್ ಎಂಡಿಗ್ ಮಾತ್ರವೇ ಸಿಗೋದು. ಮೂವರಲ್ಲಿ ಯಾರೋ ಒಬ್ಬರಿಗೆ ಕೊನೆಯಲ್ಲಿ ನೋವನುಭವಿಸಲೇಬೇಕು. ಆದ್ರೆ ಈ ಕಥೆಯಲ್ಲಿ ಇಬ್ಬರು ಸಹೋದರು ಒಂದೇ ಹುಡುಗಿಯನ್ನ ಪ್ರೀತಿಸುತ್ತಿದ್ದು, ಅದು ಗೊತ್ತಾದ ತಕ್ಷಣ ಇಬ್ಬರೂ ಕೂಡ ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೌದು ಇಂತಹದೊಂದು ದುರ್ಘಟನೆ ನಡೆದಿರೋದು ರಾಜಸ್ಥಾನದ ಗುಡ್ಲಾ ಪ್ರದೇಶದಲ್ಲಿ. ಕೇಶವರಪುರ ನಿವಾಸಿಗಳಾದ 23 ವರ್ಷದ ಈ ಅವಳಿ ಸಹೋದರರನ್ನ ದೇವರಾಜ್ ಗುರ್ಜಾರ್ ಹಾಗೂ ಮಹೇಂದ್ರ ಗುರ್ಜಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಯುವಕರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು.
ಈ ಯುವಕರು ಆತ್ಮಹತ್ಯೆಗೂ ಮುನ್ನ ವಿಡಿಯೋವೊಂದನ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆ ವಿಡಿಯೋದಲ್ಲಿ ನಮ್ಮ ಸಾವಿಗೆ ನಾವೇ ಕಾರಣ ಬೇರೇ ಯಾರೂ ಅಲ್ಲ. ಆವಿಬ್ಬರು ಒಂದೇ ಯುವತಿಯನ್ನ ಪ್ರೀತಿಸುತ್ತಿದ್ದೆವು. ಹೀಗಾಗಿ ನಾವು ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಹೇಳಿರುವುದಾಗಿ ವರದಿಯಾಗಿದೆ.








