`ನಮಃ ಶಿವಾಯ’ ಪಂಚಾಕ್ಷರಿ ಮಂತ್ರದ ಅರ್ಥವೇನು ಗೊತ್ತಾ..?
1 min read
`ನಮಃ ಶಿವಾಯ’ ಪಂಚಾಕ್ಷರಿ ಮಂತ್ರದ ಅರ್ಥವೇನು ಗೊತ್ತಾ..?
ಇಂದು ನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ ಸಡಗರ ಮನೆ ಮಾಡಿದೆ. ಸುಪ್ರಸಿದ್ಧ ಶಿವನ ದೇವಾಲಯಗಳಲ್ಲಿ ಇಂದು ಮುಂಜಾನೆಯಿಂದಲೇ ಅಭಿಷೇಕಪ್ರಿಯನಿಗೆ ವಿವಿಧ ಅಭಿಷೇಕಗಳು ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಎಲ್ಲರ ಮನಮನೆಗಳಲ್ಲಿ ಶಿವನಾಮ ಸ್ಮರಣೆ ಆಗುತ್ತಿದೆ. ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ನಾಡಿನೆಲ್ಲೆಡೆ ಕೇಳಿಬರುತ್ತಿದೆ.
ಹಾಗಾದ್ರೆ ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರದ ಅರ್ಥವೇನು..?
ಓಂ ನಮಃ ಶಿವಾಯ ಮಂತ್ರವು ಶ್ರೀ ರುದ್ರಂ ಚಮಕಂ ಎನ್ನುವ ಧಾರ್ಮಿಕ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಆರಂಭ ಎನ್ನುವ ಅರ್ಥವನ್ನು ನೀಡುವ ಓಂನಮಃ ಶಿವಾಯ ಮಂತ್ರವು ಯಜುರ್ವೇದದ ಮೂಲ ಎಂದು ಸಹ ಹೇಳಲಾಗುತ್ತದೆ.
ನ, ಮ, ಶಿ, ವಾ, ಯ ಎನ್ನುವ ಐದು ಅಕ್ಷರಗಳು ಪ್ರಕೃತಿಯ ಐದು ಅಂಶಗಳನ್ನು ಸೂಚಿಸುತ್ತವೆ. ಈ ಐದು ಅಕ್ಷರಗಳು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶವನ್ನು ಸೂಚಿಸುತ್ತವೆ.
‘ನಮಃ ಶಿವಾಯ’ಮಂತ್ರದಲ್ಲಿನ ಪ್ರತಿಯೊಂದು ಅಕ್ಷರದ ಆಧ್ಯಾತ್ಮಿಕ ಅರ್ಥ
ನ = ಸಮಸ್ತ ಲೋಕಗಳ ಆದಿದೇವ
ಮಃ = ಪರಮನವನ್ನು ಕೊಡುವವನು ಮತ್ತು ಮಹಾಪಾತಕಗಳನ್ನು ನಾಶಗೊಳಿಸುವವನು
ಶಿ = ಕಲ್ಯಾಣಕಾರಕ, ಶಾಂತ ಮತ್ತು ಶಿವನ ಅನುಗ್ರಹಕ್ಕೆ ಕಾರಣವಾದವನು
ವಾ = ವೃಷಭವಾಹನ, ವಾಸುಕಿ ಮತ್ತು ವಾಮಾಂಗಿ ಶಕ್ತಿಗಳ ಸೂಚಕ
ಯ = ಪರಮಾನಂದರೂಪ ಮತ್ತು ಶಿವನ ಶುಭ ನಿವಾಸಸ್ಥಾನ
“ಓಂ ನಮಃ ಶಿವಾಯ” ಮಂತ್ರವನ್ನು ಜಪಿಸುವುದರಿಂದ ಸಕಾರಾತ್ಮಕ ಕಂಪನಗಳು ಹೊರಹೊಮ್ಮುತ್ತವೆ. ಇದರ ಕಂಪನಗಳು ನಮ್ಮ ಉಪಪ್ರಜ್ಞೆ ಮತ್ತು ಮನಸ್ಸನ್ನು ಜಾಗ್ರತಗೊಳಿಸುತ್ತವೆ. ಆಂತರಿಕವಾಗಿ ಇರುವ ನಮ್ಮ ಮಾನಸಿಕ ಸಮಸ್ಯೆ ಹಾಗೂ ದೈಹಿಕ ಅನಾರೋಗ್ಯಗಳನ್ನು ಗುಣಪಡಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡುವುದು. ಈ ಮಂತ್ರಗಳನ್ನು ನಿರಂತರವಾಗಿ ಜಪಿಸುವುದರಿಂದ ಖಿನ್ನತೆ, ನಿದ್ರಾಹೀನತೆ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಸುಲಭವಾಗಿ ನಿವಾರಣೆಯಾಗುತ್ತವೆ.
