ದೇಶ ವಿಭಜನೆಯ 74 ವರ್ಷಗಳ ನಂತರ  ಒಂದಾದ ಅಣ್ಣತಮ್ಮಂದಿರು..

1 min read

ಭಾರತ-ಪಾಕಿಸ್ತಾನ ವಿಭಜನೆಯ 74 ವರ್ಷಗಳ ನಂತರ  ಒಂದಾದ ಅಣ್ಣತಮ್ಮಂದಿರು..

ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ, 74 ವರ್ಷಗಳ ಹಿಂದೆ ಬೇರ್ಪಟ್ಟ ಸಹೋದರರು ಮತ್ತೆ ಸಂಧಿಸಿದ ಘಟನೆ  ಬುಧವಾರ ನಡೆದಿದೆ. ದಶಕಗಳ ನಂತರ ಮತ್ತೆ ಒಂದಾದ ಅಣ್ಣ ತಮ್ಮಂದಿರ ಕಣ್ಣಾಲಿಗಳು ತುಂಬಿ ನೀರಾದವು. ಈ ಭಾವುಕ  ಸನ್ನಿವೇಶ ಅಲ್ಲಿ ನೆರೆದಿದ್ದ  ಜನರ ಕಣ್ಣುಗಳು ಸಹ ತೇವವಾದವು. ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ವಾಸಿಸುತ್ತಿರುವ ಮೊಹಮ್ಮದ್ ಸಾದಿಕ್ ಮತ್ತು ಭಾರತದಲ್ಲಿ ವಾಸಿಸುತ್ತಿರುವ ಮೊಹಮ್ಮದ್ ಹಬೀಬ್ ಅಕಾ ಅಲಿಯಾಸ್ ಶೈಲಾ ಅವರು ಪಾಕಿಸ್ತಾನದ ಶ್ರೀ ಕರ್ತಾರ್‌ಪುರ ಸಾಹಿಬ್‌ನಲ್ಲಿ 74 ವರ್ಷಗಳ ನಂತರ ಭೇಟಿಯಾದರು.

ಸೋಶಿಯಲ್ ಮೀಡಿಯಾ ಸೋದರರಿಬ್ಬರ ಮಿಲನದಲ್ಲಿ ನಾಂಧಿ ಹಾಡಿತ್ತು.  ಈ ಇಬ್ಬರೂ ಸಹೋದರರು  ಮೊದಲು ಈ ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ ಭೇಟಿಯಾಗಿದ್ದರು.  ನಂತರ ಮುಖಾಮುಖಿ ಬೇಟಿಯಾಗಿದ್ದಾರೆ.

ಗಡಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಕರ್ತಾಪುರದವರೆಗೆ ಭಾರತದಿಂದ ಪಾಕಿಸ್ತಾನಕ್ಕೆ ವೀಸಾ-ಮುಕ್ತ ಪ್ರಯಾಣಕ್ಕೆ ಅನುಕೂಲವಾಗುವಂತೆ ಕರ್ತಾರ್‌ಪುರ ಕಾರಿಡಾರ್ ಅನ್ನು ತೆರೆದಿದ್ದಕ್ಕಾಗಿ ಸಹೋದರರು ಉಭಯ ದೇಶಗಳ ಸರ್ಕಾರಗಳಿಗೆ ಧನ್ಯವಾದಗಳನ್ನು ಉಲ್ಲೇಖಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಕರ್ತಾಪುರ್ ಕಾರಿಡಾರ್ ನವೆಂಬರ್ 2019 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.

ಅಂದಹಾಗೆ, ಕಾರಿಡಾರ್‌ಗೆ ಕಾಲಿಟ್ಟ ಕೂಡಲೇ ಭಾರತೀಯ ಅಥವಾ ಪಾಕಿಸ್ತಾನಿ ಪರಸ್ಪರ ಮಾತನಾಡುವಂತಿಲ್ಲ ಅಥವಾ ನಂಬರ್ ವಿನಿಮಯ ಮಾಡಿಕೊಳ್ಳುವಂತಿಲ್ಲ  ಎಂದು ಮೊದಲ ಸೂಚನೆ ನೀಡಲಾಗುತ್ತದೆ.. ಆದರೆ  ಈ ದೃಶ್ಯ ನೋಡಿದ ನಂತರ, ಪಾಕ್ ರೇಂಜರ್‌ಗಳ ಹೃದಯವೂ ಕರಗಿದೆ.  ಸಂಜೆ 4 ಗಂಟೆಯಾದರೂ ಈ ಇಬ್ಬರು ಸಹೋದರರನ್ನು ಬೇರ್ಪಡಿಸಲು ಯಾವ ಸೈನಿಕರು ಧೈರ್ಯ ಮಾಡಲಿಲ್ಲ.

ದೇಶ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd