ಮೀನಿನ ಸಾಂಬಾರು ಮಾಡುವ ವಿಚಾರಕ್ಕೆ ಅಣ್ಣನನ್ನು ಸಹೋದರ ಕೊಲೆ ಮಾಡಿರುವ ಘಟನೆ ನಡೆದಿದೆ.
ಸತ್ಯಸಾಯಿ ಜಿಲ್ಲೆಯ ನಡಿಮಿಕುಂಟಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂಜೀವ್ ಕೊಲೆಯಾದ ವ್ಯಕ್ತಿಯಾದರೆ, ವೆಂಕಟೇಶ್ ಕೊಲೆ ಮಾಡಿದ ಸಹೋದರ. ಇಬ್ಬರೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ವೆಂಕಟೇಶನ ಪತ್ನಿ ಊರಿಗೆ ಹೋಗಿದ್ದರು. ವೆಂಕಟೇಶನ ಪತ್ನಿಗೆ ಸಂಜೀವ್ ಮೀನಿನ ಸಾರು ಮಾಡಲು ಹೇಳಿದ್ದಾನೆ. ವೆಂಕಟೇಶನ ಪತ್ನಿ ಮೀನಿನ ಸಾರು ಬೇಯಿಸಲು ಮಸಾಲೆ ತಯಾರಿಸುತ್ತಿದ್ದಾಗ ಸಹೋದರರು ಮದ್ಯ ಸೇವಿಸಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತೆರಳಿದೆ.
ಆಗ ಕಿರಿಯ ಸಹೋದರ ವೆಂಕಟೇಶ್ ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಸಂಜೀವ್ ನ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಸಂಜೀವ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.