BS Yediyurappa : ಲ್ಯಾಂಡಿಗ್ ವೇಳೆ ಸಮಸ್ಯೆ ಎದುರಿಸಿದ BSY ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸೋಮವಾರ ಕಲಬುರ್ಗಿಯ ಜೇವರ್ಗಿಯಲ್ಲಿ ಲ್ಯಾಂಡಿಂಗ್ ಸಮಸ್ಯೆ ಎದುರಿಸಿದ ಘಟನೆ ನಡೆದಿದೆ. ಹೆಲಿಕಾಪ್ಟರ್ ಲ್ಯಾಂಡ್ ಆಗಬೇಕಿದ್ದ ಪ್ರದೇಶದಲ್ಲಿ ಪ್ಲಾಸ್ಟಿಕ್ ಕವರ್ ಗಳು ತುಂಬಿದ್ದರಿಂದ ಕೊನೆಯ ಕ್ಷಣದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಸ್ಥಗಿತಗೊಳಿಸಲಾಗಿದೆ.
ಲ್ಯಾಂಡಿಂಗ್ ಸ್ಥಗಿತಗೊಳಿಸಿದ ನಂತರ, ಅಧಿಕಾರಿಗಳು ಹೆಲಿಪ್ಯಾಡ್ ಬಳಿಯ ಪ್ರದೇಶವನ್ನು ಸ್ವಚ್ಛಗೊಳಿಸುವವರೆಗೂ ಹೆಲಿಕಾಪ್ಟರ್ ಗಾಳಿಯಲ್ಲಿ ಹಾರಾಡಿದೆ. ಪೊಲೀಸರು ಸ್ವಚ್ಚಗೊಳಿಸಿದ ನಂತರ ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಚುನಾವಣ ಕಣದಿಂದ ಹಿಂದೆ ಸರಿದ ನಂತರವೂ ಸಕ್ರಿಯ ರಾಜಕಾರಣದಲ್ಲಿ ಇನ್ನೂ ತೊಡಗಿಸಿಕೊಂಡಿರುವ ಯಡಿಯೂರಪ್ಪ ಜನಪ್ರಿಯ ಮತಪ್ರಚಾರಕರಾಗಿ ಸಂಚರಿಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಜನ ಸಂಕಲ್ಪಯಾತ್ರೆ ನಡೆಯುತ್ತಿದ್ದು ಬಿಜೆಪಿ ಹಿರಿಯ ನಾಯಕರು ಕಲ್ಬುರ್ಗಿ ತಲುಪಿದ್ದಾರೆ.
BS Yediyurappa’s helicopter faces landing issues in Kalaburgi