BSF Recruitment 2023 : 1284 ಕಾನ್ಸ್‌ಟೇಬಲ್ ಹುದ್ದೆಗಳಿಗಾಗಿ ನೇಮಕಾತಿ ಅಹ್ವಾನ…
BSF Recruitment 2023 : ಗಡಿ ಭದ್ರತಾ ಪಡೆ BSF ಕಾನ್ಸ್‌ಟೇಬಲ್ ನೇಮಕಾತಿಗಾಗಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. 1284 ಖಾಲಿ ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದೆ. ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಮಾರ್ಚ್ 2023. ಆಸಕ್ತರು ಅಧಿಕೃತ ವೆಬ್‌ಸೈಟ್ https://bsf.gov.in ನ್ನ ಸಂಪರ್ಕಿಸಿ.
ಹೆಚ್ಚಿನ ಮಾಹಿತಿ ಇಲ್ಲಿದೆ…
ಸಂಸ್ಥೆಯ ಹೆಸರು ಗಡಿ ಭದ್ರತಾ ಪಡೆ
ಹುದ್ದೆ ಪ್ರಕಾರ BSF ನೇಮಕಾತಿ
ಹುದ್ದೆಗಳ ಹೆಸರು ಕಾನ್ಸ್ಟೇಬಲ್
ಒಟ್ಟು ಹುದ್ದೆಗಳು 1284
ಪ್ರಾರಂಭ ದಿನಾಂಕ 11 ಫೆಬ್ರವರಿ 2023
ಕೊನೆಯ ದಿನಾಂಕ 12 ಮಾರ್ಚ್ 2023
ಸಂಬಳ ರೂ. 21700-69100/-
ಅಧಿಕೃತ ಸೈಟ್ https://bsf.gov.in
ವಿದ್ಯಾರ್ಹತೆ
ಕಾನ್ಸ್‌ಟೇಬಲ್ ಆಕಾಂಕ್ಷಿಗಳು 10ನೇ ಪ್ರಮಾಣಪತ್ರ ಅಥವಾ ಮಾನ್ಯತೆ ಪಡೆದ ಸಂಸ್ಥೆ/ಬೋರ್ಡ್‌ನಿಂದ ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯಸ್ಸಿನ ಮಿತಿ
12 ಮಾರ್ಚ್ 2023 ರಂತೆ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು. ಗರಿಷ್ಠ ವಯಸ್ಸಿನ ಮಿತಿ 25 ವರ್ಷಗಳು
BSF Recruitment 2023 : Recruitment Invitation for 1284 Constable Posts…








