ಪಾಕ್ ಗಡಿಯಲ್ಲಿ ಡ್ರೋನ್ ಅನ್ನು ಹೊಡೆದುರುಳಿಸಿದ ಬಿಎಸ್ಎಫ್
ಪಂಜಾಬ್ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದು ಭದ್ರತಾ ಪಡೆಗಳು ಶನಿವಾರ ತಿಳಿಸಿವೆ.
ಚೀನಾ ನಿರ್ಮಿತ ಡ್ರೋನ್ ಅನ್ನು ಶುಕ್ರವಾರ ರಾತ್ರಿ 11:10 ರ ಸುಮಾರಿಗೆ ಫಿರೋಜ್ಪುರ ಸೆಕ್ಟರ್ನ ವಾನ್ ಗಡಿ ಪೋಸ್ಟ್ ಬಳಿ ಹೊಡೆದುರುಳಿಸಲಾಗಿದೆ.
ಕಪ್ಪು ಬಣ್ಣದ ಹಾರುವ ವಸ್ತುವನ್ನು ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 300 ಮೀಟರ್ ಮತ್ತು ಗಡಿ ಬೇಲಿಯಿಂದ 150 ಮೀಟರ್ ದೂರದಲ್ಲಿ ಸೆರೆಹಿಡಿಯಲಾಗಿದೆ ಎಂದು ಬಿಎಸ್ ಎಫ್ ಹೇಳಿಕೆಯಲ್ಲಿ ತಿಳಿಸಿದೆ.








