BSNL ನೇಮಕಾತಿ : ಜುಲೈ 19 ಕೊನೆಯ ದಿನಾಂಕ
ಬಿಎಸ್ ಎನ್ ಎಲ್ ನಲ್ಲಿ ಉದ್ಯೋಗವನ್ನು ಎದುರು ನೋಡುತ್ತಿರುವವರಿಗೆ ಹರ್ಯಾಣ ಬಿಎಸ್ ಎನ್ ಎಲ್ ವಿಭಾಗ ಸಿಹಿ ಸುದ್ದಿ ನೀಡಿದೆ.
ಹರ್ಯಾಣ ಬಿಎಸ್ ಎನ್ ಎಲ್ ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಭರ್ತಿ ನಡೆಯುತ್ತಿದ್ದು, ಪದವಿ / ಡಿಪ್ಲೋಮಾ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅಭ್ಯರ್ಥಿಗಳು Haryana.bsnl.co.in ಗೆ ಭೇಟಿ ನೀಡಿ ಅರ್ಜಿಸಲ್ಲಿಸಬಹುದಾಗಿದೆ.
ಈ ನೇಮಕಾತಿಯಲ್ಲಿ 44 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಎಐಸಿಟಿಇ ಅಥವಾ ಭಾರತ ಸರ್ಕಾರ ಮತ್ತು ಯುಜಿಸಿ ಯಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಯಾವುದೇ ಸ್ಟ್ರೀಮ್ ನಲ್ಲಿ ಪದವಿ / ಡಿಪ್ಲಾಮಾ ಪಡೆದ ಅಭ್ಯರ್ಥಿಗಳು ಜುಲೈ 19 ರ ಒಳಗಾಗಿ ಅರ್ಜಿಸಲ್ಲಿಸಬಹುದಾಗಿದೆ.
Haryana.bsnl.co.in ಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ನೇರವಾಗಿ ಅರ್ಜಿಸಲ್ಲಿಸಬಹುದಾಗಿದೆ.