ಚಿಕ್ಕಮಗಳೂರು : ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ – ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ಬಗ್ಗೆ ಸಚಿವ ಸಿ.ಟಿ ರವಿ ಮಾತನಾಡಿದ್ದು, ಅವರಿಬ್ಬರು ಯಾವ ಉದ್ದೇಶದಿಂದ ಭೇಟಿಯಾಗಿದ್ದಾರೋ ಗೊತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ಕಾರಣವೋ, ಮುಂದಿನ ವಿಧಾನಸಭಾ ಅಧಿವೇಶನದ ಬಗ್ಗೆ ಚರ್ಚೆಯೋ ಗೊತ್ತಿಲ್ಲ. ಕೇಂದ್ರದಿಂದ ಆ ರೀತಿಯ ಯಾವುದೇ ಚರ್ಚೆಯಾಗಲಿ, ಸೂಚನೆಯಾಗಲಿ ನಮಗಿಲ್ಲ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ದೆಹಲಿ ಭೇಟಿ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ದೆಹಲಿ ರಾಜಕೀಯ ವಲಯದಲ್ಲಿ ನಮ್ಮ ರಾಜ್ಯದ ಚರ್ಚೆ ಆಗುತ್ತಿಲ್ಲ. ಮಧ್ಯಪ್ರದೇಶ, ಬಿಹಾರ ಚುನಾವಣೆಯ ಬಗ್ಗೆ ದೆಹಲಿ ನಾಯಕರು ಮಗ್ನರಾಗಿದ್ದಾರೆ. ಮುಖ್ಯಮಂತ್ರಿಗಳು ಕೂಡ ಮುಂದಿನ ವಾರದಲ್ಲಿ ದೆಹಲಿಗೆ ತೆರಳುವ ಕುರಿತು ಹೇಳಿದ್ದಾರೆ. ಅವರು ಬಂದ ನಂತರ ಸಚಿವ ಸಂಪುಟ ವಿಸ್ತರಣೆ ಹಾಗೂ ಯಾರನ್ನು ತೆಗೆದುಕೊಳ್ಳುತ್ತಾರೆ ಎನ್ನುವುದು ಸ್ಪಷ್ಟವಾಗುತ್ತೆ ಎಂದರು.
ಇದೇ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ರವಿ, ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ಕೆಲವರು ಸುಮ್ಮನೆ ಇಂತಹ ಪ್ರಶ್ನೆಗಳನ್ನು ತೇಲಿ ಬಿಡುತ್ತಾರೆ. ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿಗಳು. ಅವರೇ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಸಿದ್ದಾರೆ.
https://www.youtube.com/watch?v=BiO5BzHk1Oc
https://youtu.be/BiO5BzHk1Oc