ADVERTISEMENT
Friday, August 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೈಸೂರು ದಸರಾ ಜಂಬೂಸಾವರಿಗೆ ಬಿಎಸ್‍ವೈ ಪುಷ್ಪಾರ್ಚನೆ; ಸರಳವಾಗಿ ಕೊನೆಗೊಂಡ 2020ರ ದಸರಾ

Kariyappa N by Kariyappa N
October 26, 2020
in Newsbeat, Politics, Samagra karnataka, ರಾಜ್ಯ
mysore dasara
Share on FacebookShare on TwitterShare on WhatsappShare on Telegram

ಮೈಸೂರು: ಕೊರೊನಾ ನಡುವೆಯೂ ನಡೆಯುತ್ತಿರುವ ಸರಳ ಮೈಸೂರು ದಸರಾಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು.
ಅಭಿಮನ್ಯು ಹೆಗಲಮೇಲೆ ಚಿನ್ನದ ಅಂಬಾರಿಯಲ್ಲಿ ಆಸೀನಳಾದ ನಾಡದೇವತೆ ಚಾಮುಂಡೇಶ್ವರಿಗೆ ಸಿಎಂ ಯಡಿಯೂರಪ್ಪ ಶುಭ ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದರು.

dasara bsy
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ರಾಜವಂಶಸ್ಥ ಯಧುವೀರ್, ಮೇಯರ್ ತಸ್ಮಿಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಕೂಡ ನಾದೇವಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ವೇಳೆ ನಾಡಗೀತೆ ಮೊಳಗಿಸಲಾಯಿತು. ಜತೆಗೆ ಫಿರಂಗಿಗಳ ಮೂಲಕ ಏಳು ಸುತ್ತು ಸಿಡಿಮದ್ದುಗಳನ್ನು ಸಿಡಿಸಲಾಯಿತು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.

Related posts

darshan-puttannaiah-meets-dk-shivakumar-karnataka-2-digital-platform

ಕೋಡಳ್ಳಿ ಹೊಸೂರಿನಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗುದ್ದಲಿ ಪೂಜೆ

August 28, 2026
darshan-puttannaiah-meets-dk-shivakumar-karnataka-2-digital-platform

ದೆಹಲಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಹತ್ವದ ಸಭೆ

August 28, 2026

dasara nandi pooje bsy
ಭುವನೇಶ್ವರಿ ದೇವಾಲಯ ಮಾರ್ಗವಾಗಿ ಆರಂಭವಾದ ಜಂಬೂಸವಾರಿ ಮೆರವಣಿಗೆ ಜಯರಾಮ ದ್ವಾರದ ಕಡೆಗೆ ಸಾಗಿತು. ನಂತರ ಎಡಕ್ಕೆ ತಿರುಗಿ ಪಾರ್ಕ ಮೂಲಕ ಕೇವಲ 40 ನಿಮಿಷಗಳಲ್ಲಿ ಜಂಬೂಸವಾರಿ ಅಂತ್ಯಗೊಂಡಿತು(2020 mysore Dasara ended simply).
ಅರಮನೆ ಆವರಣದಲ್ಲಿ ಕೇವಲ 400 ಮೀಟರ್ ಸಾಗುವ ಮೂಲಕ 2020ರ ಕೊರೊನಾ ದಸರಾ ಎಂಬ ಹಣೆಪಟ್ಟಿಯೊಂದಿಗೆ ಮೈಸೂರು ದಸರಾ ಸಂಭ್ರಮಕ್ಕೆ ತೆರೆಬಿದ್ದಿದೆ.

ಇತಿಹಾಸದ ಪುಟ ಸೇರಿದ 2020ರ ಸರಳ ದಸರಾ..!
ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ 2020ರ ಮೈಸೂರು ದಸರಾದ ಜಂಬೂಸವಾರಿ ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಯಿತು.

simple dasara
ಇದು 410ನೇ ವರ್ಷದ ದಸರಾ ಮಹೋತ್ಸವ. ವಿಜಯನಗರ ಅರಸರ ಕಾಲದಿಂದಲೂ ದಸರಾ ಆಚರಣೆಯನ್ನು ಮೈಸೂರು ರಾಜವಂಶಸ್ಥರು ನಡೆಸಿಕೊಂಡು ಬಂದಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ದಸರಾ ಮಹೋತ್ಸವವನ್ನು ರಾಜವಂಶಸ್ಥರ ಬದಲು ರಾಜ್ಯ ಸರ್ಕಾರವೇ ನಡೆಸಿಕೊಂಡು ಬರುತ್ತಿದೆ. ಬರಗಾಲ, ರಾಜವಂಶಸ್ಥರ ಮರಣ, ರಾಜಕುಮಾರ್ ಅಪಹರಣ ಸೇರಿದಂತೆ 14 ಬಾರಿ ಮಾತ್ರ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಜಂಬೂ ಸವಾರಿ ವೀಕ್ಷಣೆಗೆ 25 ಸಾವಿರಕ್ಕೆ ಬದಲು ಕೇವಲ 300 ಜನ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: 2020 mysore Dasarabsy inaugurates dasaracorona dasaraended simply
ShareTweetSendShare
Join us on:

Related Posts

darshan-puttannaiah-meets-dk-shivakumar-karnataka-2-digital-platform

ಕೋಡಳ್ಳಿ ಹೊಸೂರಿನಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗುದ್ದಲಿ ಪೂಜೆ

by admin
August 28, 2026
0

ಹಲವು ಗ್ರಾಮಗಳಿಗೆ ನಿರಂತರ, ಗುಣಮಟ್ಟದ ವಿದ್ಯುತ್ ಸಂಪರ್ಕಕ್ಕೆ ಮುನ್ನುಡಿ ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋಡಳ್ಳಿ ಹೊಸೂರಿನಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಉಪಕೇಂದ್ರ ಸ್ಥಾಪನೆ ಕಾಮಗಾರಿಗೆ...

darshan-puttannaiah-meets-dk-shivakumar-karnataka-2-digital-platform

ದೆಹಲಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಹತ್ವದ ಸಭೆ

by admin
August 28, 2026
0

ದೆಹಲಿ/ಬೆಂಗಳೂರು: ಜನಸಾಮಾನ್ಯರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸಲು ಹಾಗೂ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿರಿಸುವಂತೆ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಹತ್ವದ ಹೆಜ್ಜೆ...

magnus-carlsen-yippee-chess-contest-bengaluru-channai

ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ಜೊತೆ ಚೆಸ್ ಆಡುವ ಅವಕಾಶ: ಬೆಂಗಳೂರಿನ ಯುವಕರಿಗೆ ಬಂಪರ್ ಆಫರ್!

by admin
August 28, 2026
0

ಬೆಂಗಳೂರು: ನೀವು ಚೆಸ್ ಆಟದಲ್ಲಿ ಪರಿಣಿತರಾ? ವಿಶ್ವದ ದಿಗ್ಗಜ ಆಟಗಾರರೊಂದಿಗೆ ಒಮ್ಮೆಯಾದರೂ ಚೆಸ್ ಆಡಬೇಕು ಎಂಬ ಕನಸು ನಿಮಗಿದೆಯಾ? ಹಾಗಿದ್ದರೆ ನಿಮ್ಮ ಕನಸು ನನಸಾಗುವ ಸಮಯ ಬಂದಿದೆ!...

jawa-42-fj-all-stars-edition-launched-in-india-price-features

ಆಕರ್ಷಕ ಲುಕ್, ಬಲಿಷ್ಠ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ‘ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್’! ಬೆಲೆ ಎಷ್ಟು?

by admin
August 28, 2026
0

ಬೆಂಗಳೂರು: ಕ್ಲಾಸಿಕ್ ಬೈಕ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಜನಪ್ರಿಯ 'ಜಾವಾ 42 ಎಫ್‌ಜೆ' ಬೈಕಿನ ಹೊಚ್ಚ ಹೊಸ 'ಆಲ್ ಸ್ಟಾರ್ಸ್' ಆವೃತ್ತಿಯನ್ನು...

/manish-dalal-appointed-as-president-of-national-entrepreneurship-network

ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಎಂಟರ್‌ಪ್ರೆನ್ಯೂರ್‌ಶಿಪ್ ನೆಟ್‌ವರ್ಕ್ ಅಧ್ಯಕ್ಷರಾಗಿ ಮನೀಶ್ ದಲಾಲ್ ನೇಮಕ; ಏನಿದು ಸಂಸ್ಥೆ?

by admin
August 28, 2026
0

ಹೊಸದಿಲಲಿ: ಭಾರತದಲ್ಲಿ ಉದ್ಯಮಶೀಲತೆ ಮತ್ತು ನವೋದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಪ್ರಖ್ಯಾತ ಲಾಭರಹಿತ ಸಂಸ್ಥೆ 'ನ್ಯಾಷನಲ್ ಎಂಟರ್‌ಪ್ರೆನ್ಯೂರ್‌ಶಿಪ್ ನೆಟ್‌ವರ್ಕ್' (ಎನ್‌ಇಎನ್‌) ನೂತನ ಅಧ್ಯಕ್ಷರಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram