ADVERTISEMENT
Friday, August 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಕರ್ಷಕ ಲುಕ್, ಬಲಿಷ್ಠ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ‘ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್’! ಬೆಲೆ ಎಷ್ಟು?

admin by admin
August 28, 2026
in Newsbeat, State, Uncategorized, ರಾಜ್ಯ
jawa-42-fj-all-stars-edition-launched-in-india-price-features

jawa-42-fj-all-stars-edition-launched-in-india-price-features

Share on FacebookShare on TwitterShare on WhatsappShare on Telegram

ಬೆಂಗಳೂರು: ಕ್ಲಾಸಿಕ್ ಬೈಕ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಜನಪ್ರಿಯ ‘ಜಾವಾ 42 ಎಫ್‌ಜೆ’ ಬೈಕಿನ ಹೊಚ್ಚ ಹೊಸ ‘ಆಲ್ ಸ್ಟಾರ್ಸ್’ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ, ಬಲಿಷ್ಠ ಎಂಜಿನ್ ಮತ್ತು ಅತ್ಯಾಧುನಿಕ ಫೀಚರ್‌ಗಳೊಂದಿಗೆ ಈ ಬೈಕ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಏನಿದು ಜಾವಾ ‘ಆಲ್ ಸ್ಟಾರ್ಸ್’?

Related posts

magnus-carlsen-yippee-chess-contest-bengaluru-channai

ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ಜೊತೆ ಚೆಸ್ ಆಡುವ ಅವಕಾಶ: ಬೆಂಗಳೂರಿನ ಯುವಕರಿಗೆ ಬಂಪರ್ ಆಫರ್!

August 28, 2026
/manish-dalal-appointed-as-president-of-national-entrepreneurship-network

ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಎಂಟರ್‌ಪ್ರೆನ್ಯೂರ್‌ಶಿಪ್ ನೆಟ್‌ವರ್ಕ್ ಅಧ್ಯಕ್ಷರಾಗಿ ಮನೀಶ್ ದಲಾಲ್ ನೇಮಕ; ಏನಿದು ಸಂಸ್ಥೆ?

August 28, 2026

ಟ್ರೆಂಡ್ ಹಿಂದೆ ಹೋಗದೆ, ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಧೈರ್ಯ ಹೊಂದಿರುವ ರೈಡರ್‌ಗಳನ್ನು ಗುರುತಿಸುವ ಉದ್ದೇಶದಿಂದ ಜಾವಾ ಈ ‘ಆಲ್ ಸ್ಟಾರ್ಸ್’ ಪರಿಕಲ್ಪನೆಯನ್ನು ಪರಿಚಯಿಸಿದೆ. ಇದು ಜಾವಾ ಬೈಕ್ ಸವಾರರ ಕ್ಯಾರೆಕ್ಟರ್, ಕಾಂಡಕ್ಟ್ ಮತ್ತು ಕರೇಜ್ (ವ್ಯಕ್ತಿತ್ವ, ನಡವಳಿಕೆ ಮತ್ತು ಧೈರ್ಯ) ಅನ್ನು ಸಂಕೇತಿಸುತ್ತದೆ. ಈ ಸರಣಿಯ ಮೊದಲ ಬೈಕ್ ಆಗಿ ʼಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್’ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಹೇಗಿದೆ ಎಂಜಿನ್ ಮತ್ತು ಪರ್ಫಾರ್ಮೆನ್ಸ್? ದರ ಎಷ್ಟು?

ಹೊಸ ಜಾವಾ 42 ಎಫ್‌ಜೆ ಬೈಕ್‌ನಲ್ಲಿ 334-ಸಿಸಿ ಸಾಮರ್ಥ್ಯದ ಆಲ್ಫಾ-2 ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಇದು 29.17 ಪಿಎಸ್‌ ಗರಿಷ್ಠ ಪವರ್ ಹಾಗೂ 29.62 ನ್ಯೂಟನ್‌ಮೀಟರ್‌ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯ ಪ್ರಕಾರ, ಈ ಬೈಕ್ ತನ್ನ ಸೆಗ್ಮೆಂಟ್‌ನ ಇತರ 350ಸಿಸಿ ಬೈಕ್‌ಗಳಿಗಿಂತ ಶೇ. 42ರಷ್ಟು ಹೆಚ್ಚು ಪವರ್ ನೀಡುತ್ತದೆ.

ಸುಗಮ ಚಾಲನೆಗಾಗಿ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದ್ದು, ಇದರ ಆರಂಭಿಕ ಬೆಲೆ 2.01 ಲಕ್ಷ ರೂಪಾಯಿ (ಎಕ್ಸ್-ಶೋರೂಮ್) ಆಗಿದೆ.

ವಿನ್ಯಾಸ ಮತ್ತು ಟಾಪ್ ಫೀಚರ್ಸ್

ನಿಯೋ-ಕ್ಲಾಸಿಕ್ ವಿನ್ಯಾಸದೊಂದಿಗೆ, ಸೆಗ್ಮೆಂಟ್‌ನಲ್ಲೇ ಮೊದಲ ಬಾರಿಗೆ ಬ್ರಷ್ಡ್ ಅಲ್ಯೂಮಿನಿಯಂ ಟ್ಯಾಂಕ್ ಪ್ಯಾನೆಲ್‌ಗಳನ್ನು ನೀಡಲಾಗಿದ್ದು, ಬೈಕ್‌ಗೆ ಸ್ಪೋರ್ಟಿ ಲುಕ್ ತಂದುಕೊಟ್ಟಿದೆ.

ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಲ್-ಎಲ್ಇಡಿ ಲೈಟಿಂಗ್ ವ್ಯವಸ್ಥೆ ಇದರಲ್ಲಿದ್ದು, ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ನೀಡಲಾಗಿದೆ. ಮುಂಭಾಗ 320 ಎಂಎಂ ಮತ್ತು ಹಿಂಭಾಗ 240 ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

ಸಸ್ಪೆನ್ಷನ್ ವಿಚಾರಕ್ಕೆ ಬರುವುದಾದರೆ, ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 5-ಸ್ಟೆಪ್ ಅಡ್ಜಸ್ಟಬಲ್ ಗ್ಯಾಸ್-ಫಿಲ್ಡ್ ಟ್ವಿನ್ ಶಾಕ್ ಅಬ್ಸಾರ್ಬರ್ ಇದೆ. ಗುಂಡಿ ಬಿದ್ದ ರಸ್ತೆಗಳಲ್ಲೂ ಇದು ಆರಾಮದಾಯಕ ರೈಡ್ ನೀಡುತ್ತದೆ.
790 ಎಂಎಂ ಸೀಟ್ ಎತ್ತರ, 178 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 12-ಲೀಟರ್ ಇಂಧನ ಟ್ಯಾಂಕ್ ಇದರಲ್ಲಿದೆ. ಬೈಕಿನ ಒಟ್ಟು ತೂಕ 184 ಕೆ.ಜಿ. ಆಗಿದೆ.

ಬಣ್ಣಗಳು ಮತ್ತು ಬೆಲೆ

ಈ ಬೈಕ್ ಒಟ್ಟು ಆರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ವಿಶೇಷವೆಂದರೆ ಇದರಲ್ಲಿ ಕ್ರೋಮ್ ಎಡಿಷನ್ ಕೂಡ ಸೇರಿದೆ. ವಿವಿಧ ಬೈಕ್‌ಗಳ ದೆಹಲಿ ಎಕ್ಸ್‌ ಶೋರೂಂ ದರಗಳು ಈ ಕೆಳಗಿನಂತಿವೆ.
* ಆಲ್ ಸ್ಟಾರ್ಸ್ ಅರೋರಾ ಗ್ರೀನ್: 2,01,942 ರೂ.
* ಆಲ್ ಸ್ಟಾರ್ಸ್ ರೆಡ್: 2,01,942 ರೂ.
* ಆಲ್ ಸ್ಟಾರ್ಸ್ ನೆಬ್ಯುಲಾ ಬ್ಲೂ: 2,07,942 ರೂ.
* ಆಲ್ ಸ್ಟಾರ್ಸ್ ಮ್ಯಾಟ್ ಬ್ಲ್ಯಾಕ್ (ರೆಡ್ ಕ್ಲಾಡ್): 2,07,942 ರೂ.
* ಆಲ್ ಸ್ಟಾರ್ಸ್ ಮ್ಯಾಟ್ ಬ್ಲ್ಯಾಕ್ (ಬ್ಲ್ಯಾಕ್ ಕ್ಲಾಡ್): 2,07,942 ರೂ.
* ಆಲ್ ಸ್ಟಾರ್ಸ್ ಕ್ರೋಮ್ : 2,15,942 ರೂ.

ಗ್ರಾಹಕರಿಗೆ ಭರ್ಜರಿ ಆಫರ್

ಜಾವಾ ಯೆಜ್ಡಿ ಕಂಪನಿಯು ಈ ಬೈಕಿನ ಮೇಲೆ ಭರ್ಜರಿ ವಾರಂಟಿ ಪ್ಯಾಕೇಜ್ ಘೋಷಿಸಿದೆ.
* 4 ವರ್ಷ ಅಥವಾ 50,000 ಕಿ.ಮೀ ಸ್ಟ್ಯಾಂಡರ್ಡ್ ವಾರಂಟಿ (ಇದನ್ನು 6 ವರ್ಷಗಳವರೆಗೆ ವಿಸ್ತರಿಸಬಹುದು).
* 8 ವರ್ಷಗಳವರೆಗೆ ರೋಡ್ ಸೈಡ್ ಅಸಿಸ್ಟೆನ್ಸ್ ಸೌಲಭ್ಯ.
* 5 ವರ್ಷಗಳವರೆಗೆ ವಾರ್ಷಿಕ ನಿರ್ವಹಣೆ (ಎಎಂಸಿ) ಪ್ಯಾಕೇಜ್‌

ವಿಶಿಷ್ಟವಾದ ನಿಯೋ ಕ್ಲಾಸಿಕ್‌ ವಿನ್ಯಾಸ, ಬಲವಾದ ರೋಡ್‌ ಪ್ರಸೆನ್ಸ್‌ ಮತ್ತು ಆಕರ್ಷಕ ಕಾರ್ಯಕ್ಷಮತೆ ಹೊಂದಿರುವ ಜಾವಾ 42 ಎಫ್‌ಜೆ ಬೈಕ್, 2024 ಮತ್ತು 2025ನೇ ಸಾಲಿನ ಪ್ರತಿಷ್ಠಿತ ವ್ಯೂವರ್ಸ್ ಚಾಯ್ಸ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ವಿಶೇಷ.

ದೇಶಾದ್ಯಂತ ಇರುವ 450 ಕ್ಕೂ ಹೆಚ್ಚು ಜಾವಾ ಯೆಜ್ಡಿ ಶೋರೂಮ್‌ಗಳಲ್ಲಿ ಈ ಹೊಸ ಬೈಕ್ ಬುಕ್ಕಿಂಗ್ ಮತ್ತು ಖರೀದಿಗೆ ಲಭ್ಯವಿದೆ.

Tags: #Jawa42FJ #AllStars #JawaYezdi #ClassicBikes #SaakshaTV #AutomobileNews
ShareTweetSendShare
Join us on:

Related Posts

magnus-carlsen-yippee-chess-contest-bengaluru-channai

ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ಜೊತೆ ಚೆಸ್ ಆಡುವ ಅವಕಾಶ: ಬೆಂಗಳೂರಿನ ಯುವಕರಿಗೆ ಬಂಪರ್ ಆಫರ್!

by admin
August 28, 2026
0

ಬೆಂಗಳೂರು: ನೀವು ಚೆಸ್ ಆಟದಲ್ಲಿ ಪರಿಣಿತರಾ? ವಿಶ್ವದ ದಿಗ್ಗಜ ಆಟಗಾರರೊಂದಿಗೆ ಒಮ್ಮೆಯಾದರೂ ಚೆಸ್ ಆಡಬೇಕು ಎಂಬ ಕನಸು ನಿಮಗಿದೆಯಾ? ಹಾಗಿದ್ದರೆ ನಿಮ್ಮ ಕನಸು ನನಸಾಗುವ ಸಮಯ ಬಂದಿದೆ!...

/manish-dalal-appointed-as-president-of-national-entrepreneurship-network

ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಎಂಟರ್‌ಪ್ರೆನ್ಯೂರ್‌ಶಿಪ್ ನೆಟ್‌ವರ್ಕ್ ಅಧ್ಯಕ್ಷರಾಗಿ ಮನೀಶ್ ದಲಾಲ್ ನೇಮಕ; ಏನಿದು ಸಂಸ್ಥೆ?

by admin
August 28, 2026
0

ಹೊಸದಿಲಲಿ: ಭಾರತದಲ್ಲಿ ಉದ್ಯಮಶೀಲತೆ ಮತ್ತು ನವೋದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಪ್ರಖ್ಯಾತ ಲಾಭರಹಿತ ಸಂಸ್ಥೆ 'ನ್ಯಾಷನಲ್ ಎಂಟರ್‌ಪ್ರೆನ್ಯೂರ್‌ಶಿಪ್ ನೆಟ್‌ವರ್ಕ್' (ಎನ್‌ಇಎನ್‌) ನೂತನ ಅಧ್ಯಕ್ಷರಾಗಿ...

ಹೈಕಮಾಂಡ್ ಒಪ್ಪದಿದ್ದರೂ ನನ್ನ ಪರ ನಿಂತಿದ್ದರು ಸಿದ್ದು-ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು ಸತ್ಯ: ಹಳೆಯ ರಹಸ್ಯ ಬಿಚ್ಚಿಟ್ಟ ಉಪಮುಖ್ಯಮಂತ್ರಿ.

ಹೈಕಮಾಂಡ್ ಒಪ್ಪದಿದ್ದರೂ ನನ್ನ ಪರ ನಿಂತಿದ್ದರು ಸಿದ್ದು-ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು ಸತ್ಯ: ಹಳೆಯ ರಹಸ್ಯ ಬಿಚ್ಚಿಟ್ಟ ಉಪಮುಖ್ಯಮಂತ್ರಿ.

by Shwetha
August 28, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಮತ್ತು ಜಿ ಪರಮೇಶ್ವರ ಅವರ ನಡುವಿನ ಸಂಬಂಧದ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಅಧಿಕಾರ...

ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ; ಸಂಪುಟ ಉಪಸಮಿತಿ ರಚನೆ

ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ; ಸಂಪುಟ ಉಪಸಮಿತಿ ರಚನೆ

by Shwetha
August 28, 2026
0

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು...

ನೇಪಾಳದಲ್ಲಿ ಭೀಕರ ಪ್ರವಾಹ; ಕೈಲಾಸ ಮಾನಸ ಸರೋವರ ಯಾತ್ರೆಯ 750ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಾಪತ್ತೆ

ನೇಪಾಳದಲ್ಲಿ ಭೀಕರ ಪ್ರವಾಹ; ಕೈಲಾಸ ಮಾನಸ ಸರೋವರ ಯಾತ್ರೆಯ 750ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಾಪತ್ತೆ

by Shwetha
August 28, 2026
0

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ 133 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು ಸೇರಿದಂತೆ 750ಕ್ಕೂ ಹೆಚ್ಚು ಯಾತ್ರಾರ್ಥಿಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram