ಬೆಂಗಳೂರು : ಇಂದು ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಟ್ವಿಟ್ಟರ್ ನಲ್ಲಿ ತಮ್ಮ ಆತ್ಮೀಯ ಮಿತ್ರನನ್ನು ಸ್ಮರಿಸಿದ್ದಾರೆ.
ಬಿಎಸ್ ವೈ ಟ್ವೀಟ್ ನಲ್ಲಿ..
`ಇಂದು ನನ್ನ ಆತ್ಮೀಯ ಮಿತ್ರ, ದಶಕಗಳ ರಾಜಕೀಯ ಜೀವನದ ಒಡನಾಡಿ, ಸಾರ್ವಜನಿಕ ಜೀವನದಲ್ಲಿ ಅಚ್ಚಳಿಯದ ನೆನಪು, ಸಾಧನೆ, ಸಾರ್ಥಕತೆಗಳನ್ನು ಬಿಟ್ಟುಹೋಗಿರುವ ಹಿರಿಯ ನಾಯಕ ಅನಂತಕುಮಾರ್ ಅವರ ಜನ್ಮದಿನ. ಲಕ್ಷಾಂತರ ಕಾರ್ಯಕರ್ತರ ಪಾಲಿಗೆ ಸದಾ ಸ್ಫೂರ್ತಿಯಾಗಿರುವ ಅನಂತಕುಮಾರ್, ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಮತ್ತು ಸಂಘಟನೆಗೆ ನೀಡಿದ ಕೊಡುಗೆ ಅನನ್ಯ’ ಎಂದು ಬರೆದುಕೊಂಡಿದ್ದಾರೆ.