ಮೂರು ವರ್ಷದ ಬಾಲಕನಿಗೆ ಬುಬೊನಿಕ್ ಪ್ಲೇಗ್ – ಚೀನಾದ ಯುನ್ನಾನ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಬೀಜಿಂಗ್, ಸೆಪ್ಟೆಂಬರ್30: ಮೂರು ವರ್ಷದ ಬಾಲಕನಿಗೆ ಬುಬೊನಿಕ್ ಪ್ಲೇಗ್ ಸೋಂಕು ತಗುಲಿದೆಯೆಂದು ಖಚಿತವಾದ ನಂತರ ಚೀನಾದ ಯುನ್ನಾನ್ ಪ್ರದೇಶ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಮಾಧ್ಯಮಗಳ ವರದಿಗಳ ಪ್ರಕಾರ, ಚೀನಾದ ಯುನ್ನಾನ್ ಪ್ರಾಂತ್ಯದ ಮೆಂಗೈ ಪ್ರದೇಶದ ಹಳ್ಳಿಯ ಮೂರು ವರ್ಷದ ಮಗುವಿಗೆ ಭಾನುವಾರ ಈ ಕಾಯಿಲೆ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಲೆವೆಲ್ -4 ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ಪ್ರಕರಣವು ಲಘವಾಗಿದ್ದು, ಬಾಲಕನಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ನೇಪಾಳದಲ್ಲಿ ಚೀನಾ ವಿರುದ್ಧ ತೀವ್ರಗೊಂಡ ಪ್ರತಿಭಟನೆ
ಹಳ್ಳಿಯಲ್ಲಿ ಮೂರು ಇಲಿಗಳು ಸತ್ತ ನಂತರ ಬುಬೊನಿಕ್ ಪ್ಲೇಗ್ ಪ್ರಕರಣವನ್ನು ಆರಂಭದಲ್ಲಿ ಶಂಕಿತಲಾಗಿತ್ತು. ನಂತರ ಆರೋಗ್ಯ ಅಧಿಕಾರಿಗಳು ಪ್ರದೇಶದಾದ್ಯಂತ ತಪಾಸಣೆ ನಡೆಸಿದರು.
ಡಿಆರ್ಡಿಒ – ರಿಸರ್ಚ್ ಸೆಂಟರ್ ಇಮರತ್ (ಆರ್ಸಿಐ) ನಲ್ಲಿ ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ
ಸೋಂಕಿತ ಇಲಿಗಳು ರೋಗದ ಪ್ರಮುಖ ಮೂಲವಾಗಿದೆ. ಇದು ಸೋಂಕಿತ ಚಿಗಟಗಳಿಂದ ಕಚ್ಚುವ ಮೂಲಕ ಮನುಷ್ಯರಿಗೂ ಹರಡುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ರೋಗವು ಯುನ್ನಾನ್‌ನಾದ್ಯಂತ ಹರಡುವ ಸಾಧ್ಯತೆಯಿಲ್ಲ ಆದರೆ ಇಲಿಗಳಲ್ಲಿ ಸೋಂಕಿನ ಸಾಧ್ಯತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ ಎಂದು ಅವರು ಹೇಳಿದರು. ಜುಲೈನಲ್ಲಿ, ಚೀನಾದ ಸ್ವಾಯತ್ತ ಪ್ರದೇಶದಲ್ಲಿ ಮೆಂಗೈಗೆ ಈಶಾನ್ಯಕ್ಕೆ 2,200 ಮೈಲಿ ದೂರದಲ್ಲಿರುವ ಇನ್ನರ್ ಮಂಗೋಲಿಯಾದಲ್ಲಿ ಒಂದು ದನಗಾಹಿ ವ್ಯಕ್ತಿಗೆ ಈ ಸೋಂಕು ಪತ್ತೆಯಾದ ನಂತರ ಒಂದು ಹಂತದ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಪಶ್ಚಿಮ ಮಂಗೋಲಿಯಾದಲ್ಲಿ ಬುಬೊನಿಕ್ ಪ್ಲೇಗ್‌ನಿಂದ 15 ವರ್ಷದ ಬಾಲಕ ಸೋಂಕಿತ ಮಾರ್ಮೊಟ್ ತಿಂದು ಮೃತಪಟ್ಟಿದ್ದ.
ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆಯಲು ನಿರ್ಧರಿಸಿರುವ 17 ದುರುದ್ದೇಶಪೂರಿತ ಅಪ್ಲಿಕೇಶನ್ಗಳ ಪಟ್ಟಿ ಇಲ್ಲಿದೆ
ಮಾರ್ಮೋಟ್‌ಗಳಲ್ಲಿ ಪ್ಲೇಗ್ ಕಂಡುಬರುತ್ತದೆ. ವಿಸ್ತಾರವಾದ ಉತ್ತರ ಏಷ್ಯಾದ ಹುಲ್ಲುಗಾವಲಿನಲ್ಲಿ ಬಿಲಗಳಲ್ಲಿ ವಾಸಿಸುವ ದೊಡ್ಡ ದಂಶಕಗಳು ಮತ್ತು ಮಂಗೋಲಿಯಾ, ವಾಯುವ್ಯ ಚೀನಾ ಮತ್ತು ಪೂರ್ವ ರಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








