ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆಯಲು ನಿರ್ಧರಿಸಿರುವ 17 ದುರುದ್ದೇಶಪೂರಿತ ಅಪ್ಲಿಕೇಶನ್‌ಗಳ ಪಟ್ಟಿ ಇಲ್ಲಿದೆ
ಹೊಸದಿಲ್ಲಿ, ಸೆಪ್ಟೆಂಬರ್30: ಟೆಕ್ ದೈತ್ಯ ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ದುರುದ್ದೇಶಪೂರಿತ ಅಪ್ಲಿಕೇಶನ್ ಗಳನ್ನು ತೆಗೆದುಹಾಕುವುದನ್ನು ಮುಂದುವರೆಸಿದೆ.
ಬ್ರೆಡ್ ಮಾಲ್ವೇರ್ ಎಂದೂ ಕರೆಯಲಾಗುವ ಜೋಕರ್ ಮಾಲ್ವೇರ್ ಗೆ ಹೊಂದಿರುವ 17 ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ಗೂಗಲ್ ಸೋಮವಾರ ಪ್ರಕಟಿಸಿದೆ. ಈ 17 ಅಪ್ಲಿಕೇಶನ್‌ಗಳು ಬಳಕೆದಾರರ ಡೇಟಾಗೆ ಅನಧಿಕೃತ ಪ್ರವೇಶವನ್ನು ಪಡೆಯುವ ಹಿನ್ನೆಲೆಯಲ್ಲಿ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಗೆ ಅಪಾಯಕಾರಿಯಾದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೂಗಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಸ್ಪೈವೇರ್ ಅನ್ನು ಎಸ್‌ಎಂಎಸ್ ಸಂದೇಶಗಳು, ಸಂಪರ್ಕ ಪಟ್ಟಿಗಳು ಮತ್ತು ಸಾಧನದ ಮಾಹಿತಿಯನ್ನು ಕದಿಯಲು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಪ್ರೀಮಿಯಂ ವೈರ್‌ಲೆಸ್ ಅಪ್ಲಿಕೇಷನ್ ಪ್ರೋಟೋಕಾಲ್ (ಡಬ್ಲ್ಯುಎಪಿ) ಸೇವೆಗಳಿಗಾಗಿ ಇದು ಗೊತ್ತಿಲ್ಲದೆ ಸೈನ್ ಅಪ್ ಮಾಡುತ್ತದೆ. ಗುರುತಿಸಲಾದ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳಿಗಾಗಿ ಸುಮಾರು 120,000 ಡೌನ್‌ಲೋಡ್‌ಗಳಾಗಿವೆ.
ಈ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದ್ದರೂ, ಈಗಾಗಲೇ ಈ 17 ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ ಬಳಕೆದಾರರು ಅವುಗಳನ್ನು ಅಳಿಸಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ.
ರೈತರ ಪೂಜಿಸುವ ಉಪಕರಣಗಳಿಗೆ ಬೆಂಕಿ ಹಚ್ಚುವ ಮೂಲಕ ಅವರನ್ನ ಅವಮಾನಿಸಿದ್ದಾರೆ : ಮೋದಿ
ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿರುವ ‘ಜೋಕರ್ ಮಾಲ್‌ವೇರ್ ಹೊಂದಿರುವ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
1. ಆಲ್ ಗುಡ್ ಪಿಡಿಎಫ್ ಸ್ಕಾನರ್(All Good PDF Scanner)
2. ಡೈರೆಕ್ಟ್ ಮೆಸೆಂಜರ್(Direct Messenger)
3. ಮಿಂಟ್ ಲೀಪ್ ಮೇಸೆಜ್ – ಯುವರ್ ಪ್ರೈವೇಟ್ ಮೇಸೆಜ್( Mint Leaf Message-Your Private Message)
4. ಟಾನ್’ಗ್ರಾಮ್ ಅ್ಯಪ್ ಲಾಕ್ (Tangram App Lock)
5. ಯುನಿಕ್ಯೂ ಕೀಬೋರ್ಡ್-ಫ್ಯಾನ್ಸಿ ಫಾಂಟ್ಸ್ ಆ್ಯಂಡ್ ಫ್ರೀ ಇಮೋಟಿಕನ್ (Unique Keyboard – Fancy Fonts & Free Emoticons)
6. ಪ್ರೈವೇಟ್ ಎಸ್.ಎಂ.ಎಸ್ (Private SMS)
7. ಸ್ಟೈಲ್ ಫೋಟೋ ಕೊಲೇಜ್( Style Photo Collage)
8. ಒನ್ ಸೆನ್’ಟೆನ್ಸ್ ಟ್ರಾನ್ಸ್ ಲೇಟರ್ – ಮಲ್ಟಿಫಂಕ್ಷನಲ್ ಟ್ರಾನ್ಸ್ ಲೇಟರ್ (One Sentence Translator – Multifunctional Translator)
9. ಮೆಟಿಕ್ಯುಲಸ್ ಸ್ಕ್ಯಾನರ್ ( Meticulous Scanner)
10. ಕೇರ್ ಮೇಸೆಜ್ (Care Message)
11. ಡಿಸೈರ್ ಟ್ರಾನ್ಸ್ ಲೇಟ್( Desire Translate)
12. ಟ್ಯಾಲೆಂಟ್ ಫೋಟೋ ಎಡಿಟರ್- ಬ್ಲರ್ ಪೋಕಸ್( Talent Photo Editor – Blur focus)
13. ಪಾರ್ಟ್ ಮೇಸೆಜ್(Part Message)
14. ಪೇಪರ್ ಡಾಕ್ ಸ್ಕ್ಯಾನರ್(Paper Doc Scanner)
15. ಬ್ಲೂ ಸ್ಕ್ಯಾನರ್ ( Blue Scanner)
ಹಮ್ಮಿಂಗ್ ಬರ್ಡ್ ಪಿಡಿಎಫ್ ಕನ್ವರ್ಟರ್ – ಫೋಟೋ ಟು ಪಿಡಿಎಫ್(Hummingbird PDF Converter – Photo to PDF)
17. ಆಲ್ ಗುಡ್ ಪಿಡಿಎಫ್ ಸ್ಕ್ಯಾನರ್ ( All Good PDF Scanner)
ಆರ್ಬಿಐ -ಸತತ ಎರಡನೇ ಬಾರಿಗೆ ಬಡ್ಡಿದರಗಳ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆ
ಸುರಕ್ಷತೆ ಮತ್ತು ಗೌಪ್ಯತೆ ಕಾಳಜಿಗಳಿಗಾಗಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿರುವುದು ಇದೇ ಮೊದಲಲ್ಲ. ಈ ವರ್ಷದ ಜುಲೈನಲ್ಲಿ, ಟೆಕ್ ದೈತ್ಯ ಆಂಡ್ರಾಯ್ಡ್ ಆಪ್ ಸ್ಟೋರ್‌ನಿಂದ ಆಡ್‌ವೇರ್ ಒಳಗೊಂಡಿರುವ 29 ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಈ ಅಪ್ಲಿಕೇಶನ್‌ಗಳು ಆಡ್‌ವೇರ್ ಅನ್ನು ಹರಡುತ್ತಿವೆ ಎಂದು ಗೂಗಲ್ ಹೇಳಿದೆ. ಈಗಾಗಲೇ ಸುಮಾರು 200,000 ಸಾರಿ ಡೌನ್ಲೋಡ್ ಮಾಡಲಾಗಿರುವ ಈ ಅಪ್ಲಿಕೇಶನ್ಗಳಲ್ಲಿ ಯಾವುದಾದರೂ ಇದ್ದರೆ ತಕ್ಷಣ ಅವುಗಳನ್ನು ಡಿಲೀಟ್ ಮಾಡುವಂತೆ ಗೂಗಲ್ ಸೂಚಿಸಿದೆ








