Budget 2022 – ಈ ಬಾರಿಯೂ ಕಾಗದ ರಹಿತ ಬಜೆಟ್ – ಹಲ್ವ ವಿತರಣೆಗೆ ಬ್ರೇಕ್
2022-23 ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಕಾಗದ ರಹಿತ ಬಜೆಟ್ ಅನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಆದರೆ, ಈ ಬಾರಿ ಸಾಂಪ್ರದಾಯಿಕ ಹಲ್ವಾ ಆಚರಣೆ ಕೋವಿಡ್ ನಿಂದಾಗಿ ಬ್ರೇಕ್ ಬಿದ್ದಿದೆ.ಪ್ರತಿ ವರ್ಷ ಬಜೆಟ್ನ ಅಂತಿಮ ಪ್ರಕ್ರಿಯೆ ಆರಂಭಿಸುವ ಮುನ್ನ ಹಲ್ವಾ ಸಮಾರಂಭ ಆಯೋಜಿಸಲಾಗುತ್ತಿದ್ದು, ಈ ಬಾರಿ ಅದು ಸಾಧ್ಯವಾಗಿಲ್ಲ.
ಬಜೆಟ್ ನೌಕರರು ಗೃಹಬಂಧನದಲ್ಲಿ
ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಲ್ವಾ ಆಚರಣೆಯನ್ನು ಮಾಡಲಾಗಿಲ್ಲ ಎಂದು ಸರ್ಕಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಬದಲಾಗಿ, ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಿ ಪ್ರಮುಖ ಉದ್ಯೋಗಿಗಳಿಗೆ ಸಿಹಿತಿಂಡಿಗಳನ್ನು ನೀಡಲಾಗಿದೆ. ಬಜೆಟ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ನೌಕರರು ಗೃಹ ಬಂಧನದಲ್ಲಿರುತ್ತಾರೆ
ಕೇಂದ್ರ ಹಣಕಾಸು ಸಚಿವರು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ನಂತರವೇ ಈ ಅಧಿಕಾರಿಗಳು ಮತ್ತು ನೌಕರರು ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಂಪರ್ಕಕ್ಕೆ ಸಾಧ್ಯವಾಗುತ್ತದೆ. ಬಜೆಟ್ ಅನ್ನು ಗೌಪ್ಯವಾಗಿಡುವ ಉದ್ದೇಶದಿಂದ ಬಜೆಟ್ ಪ್ರಕ್ರಿಯೇ ಶುರುವಾದಾಗಿನಿಂದ ಮುಗಿಯುವವರೆಗೂ ಗೃಹ ಬಂಧನದಲಲ್ಇ ಇರಿಸಲಾಗುತ್ತದೆ.