ಮಾರ್ಚ್ 4ರಂದು ಬಜೆಟ್ ಅಧಿವೇಶನ? Saaksha Tv
ಬೆಂಗಳೂರು: ರಾಜ್ಯ ಬಜೆಟ್ ಅಧಿವೇಶನದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು, ಆದರೆ, ದಿನಾಂಕವನ್ನು ಅಂತಿಮಗೊಳಿಸಿಲ್ಲ.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಜೆಟ್ ದಿನಾಂಕ ಘೋಷಣೆ ಮಾಡಲು ನಿರಾಕರಿಸಿದರು. ಎಲ್ಲಾ ಇಲಾಖೆಗಳ ಬಜೆಟ್ ಸಭೆ ಕರೆದಿದ್ದೇನೆ. ಪ್ರಮುಖ ಸಂಘ-ಸಂಸ್ಥೆಗಳ ಜೊತೆ ಚರ್ಚೆ ಮಾಡಬೇಕು. ಬಳಿಕ ದಿನಾಂಕ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಇಂದಿನ ಸಭೆ ಯಲ್ಲಿ ಮಾರ್ಚ್ 4 ಅಥವಾ ಮಾರ್ಚ್ 7ಕ್ಕೆ ಬಜೆಟ್ ಸೆಷನ್ ಪ್ರಾರಂಭಿಸುವ ಬಗ್ಗೆ ಸಮಾಲೋಚನೆ ನಡೆದಿದೆ. ಬಹುತೇಕ ಮಾರ್ಚ್ 4ರಂದು ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಈ ಮೂಲಕ ಸಿಎಂ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ.
ಸಂಪುಟ ಸಭೆಯಲ್ಲಿ ಕರ್ನಾಟಕ ಗೆಜೆಟೆಡ್ ಪ್ರೊಬೆಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) (ತಿದ್ದುಪಡಿ) ನಿಯಮಗಳು, 2022ಕ್ಕೆ ಅನುಮೋದನೆ ನೀಡಲಾಗಿದೆ. ಇದರ ಮೂಲಕ ಕೆಪಿಎಸ್ಸಿ ವ್ಯಕ್ತಿತ್ವ ಪರೀಕ್ಷೆ (ವೈವಾ)ದಲ್ಲಿನ ಈಗಿರುವ 50 ಅಂಕವನ್ನು 25ಕ್ಕೆ ಕಡಿತಗೊಳಿಸುವ ನಿಟ್ಟಿನಲ್ಲಿ ನಿಯಮಕ್ಕೆ ತಿದ್ದುಪಡಿ ತರಲಾಗುತ್ತದೆ.








