Budget Session : ಇಂದಿನಿಂದ ಕಲಾಪ ಆರಂಭ ; ಆರಂಭದಲ್ಲೇ ಗದ್ದಲ – ಉಭಯ ಸದನಗಳು ಮುಂದೂಡಿಕೆ…
ಎರಡನೇ ಹಂತದ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ, ಸಂಸತ್ತಿನ ಉಭಯ ಸದನಗಳು ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ನಾಯಕರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮತ್ತು ಕಾಂಗ್ರಸ್ ಪಕ್ಷಗಳ ಗದ್ದಲದ ಹಿನ್ನಲೆಯಲ್ಲಿ ಸಭಾಪತಿಗಳು ಉಭಯ ಸದನಗಳನ್ನು 2 ಗಂಟೆಯವರೆಗೆ ಮುಂದೂಡಿದ್ದಾರೆ.
ರಾಹುಲ್ ಗಾಂಧಿ ಇತ್ತೀಚೆಗೆ ಬ್ರಿಟನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುತ್ತ, ಭಾರತದ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಮೈಕ್‌ಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಆರೋಪಿಸಿದ್ದರು. ದೇಶದ ವ್ಯವಸ್ಥೆಗಳು ಪೂರ್ಣ ಪ್ರಮಾಣದ ದಾಳಿಗೆ ಒಳಗಾಗಿವೆ ಎಂದು ನೀಡದ್ದ ಹೇಳಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದ್ದು, ಬಿಜೆಪಿ ಈ ಹೇಳಿಕೆಯನ್ನ ಕಟು ಮಾತುಗಳಲ್ಲಿ ಟೀಕಿಸಿದೆ.
ಈ ಕುರಿತು ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶ ಸಂವಿಧಾನದ ಪ್ರಕಾರ ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ. ರಾಜ್ಯಸಭೆಯಲ್ಲಿ ಇದು ಪ್ರತಿಧ್ವನಿಸಿದ್ದು ರಾಹುಲ್ ಗಾಂಧಿ ಲಂಡನ್ ನಲ್ಲಿ ಭಾರತವನ್ನ ಅವಮಾನಿಸಿದ್ದಾರೆ, ಸದನದ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
Budget Session: Session starts from today; Uproar in the beginning – Adjournment of both Houses…