Buland Shehar : ಬಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಬಸ್ಸಿನಲ್ಲಿ ಮಗುವಿನ ಜನ್ಮ ನೀಡಿದ ಮಹಿಳೆ
ಉತ್ತರಪ್ರದೇಶದ ಛಿಬ್ರಮೌದಲ್ಲಿ ಘಟನೆ
ಆಸ್ಪತ್ರೆಗೆ ಸಾಗಿಸಿದ ಬಸ್ ಚಾಲಕ
ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ದೆಹಲಿಯಿಂದ ತಮ್ಮ ಊರಿಗೆ ತೆರಳುವಾಗ ಘಟನೆ
ಬಸ್ಸಿನಲ್ಲಿಯೇ ಮಹಿಳೆಯೊಬ್ಬರು ಗಂಡುಮಗುವಿಗೆ ಜನ್ಮ ನೀಡಿರುವಂತಹ ಘಟನೆಯು ಉತ್ತರ ಪ್ರದೇಶ ಸಮೀಪದ ಛಿಬ್ರಮೌನಲ್ಲಿ ಘಟನೆ ನಡೆದಿದೆ..
ನಂತರ ಬಸ್ ಚಾಲಕ ಆಸ್ಪತ್ರೆಗೆ ಸಾಗಿಸಿದ್ದಾರೆ, ತಾಯಿ ಮತ್ತು ನವಜಾತ ಶಿಶುವಿಗೆ ಚಿಕಿತ್ಸೆ ನೀಡಲಾಗಿದೆ.
ದೆಹಲಿಯಿಂದ ಛಿಬ್ರಮೌಗೆ ತೆರಳುತ್ತಿದ್ದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಹೆರಿಗೆಯಾಗಿದೆ ಎಂದು ಬಸ್ಸಿನ ಸಹ ಚಾಲಕ ಅಲೋಕ್ ಕುಮಾರ್ ಹೇಳಿದ್ದಾರೆ.
ಜೊತೆಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಪತಿ ಸೋಮೇಶ್ ಕುಮಾರ್ ಅವರು ದೆಹಲಿಯಿಂದ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದರು…
ಮಹಿಳೆ ಹೆರಿಗೆ ನೋವು ಎಂದು ಹೇಳಿದಾಗ ಬಸ್ ಚಾಲಕ ವಾಹನ ನಿಲ್ಲಿಸಿದ್ದಾರೆ. ಅಲ್ಲಿಯೇ ಇದ್ದ ಮಹಿಳೆಯರು ಹೆರಿಗೆಗೆ ಸಹಾಯ ಮಾಡಿದ್ದಾರೆ.. ನಂತರ ಅವರು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಸೋಮೇಶ್ ಕುಮಾರ್ ತಿಳಿಸಿದರು.
Buland Shehar : mother gave birth to child in bus , saakshatv