ಶ್ರೀಲಂಕಾದಲ್ಲಿ ಇನ್ಮುಂದೆ ಬುರ್ಖಾ ಧರಿಸುವಂತಿಲ್ಲ : ಲಂಕಾ ಸರ್ಕಾರದಿಂದ ಮಹತ್ವದ ಕ್ರಮ..!
ಶ್ರೀಲಂಕಾ: ಶ್ರೀಲಂಕಾದಲ್ಲಿ ಬುರ್ಖಾ ಧಾರಣೆ ಸಂಬಂಧಿತ ಮಹತ್ವದ ಕಾನೂನು ತರಲು ಅಲ್ಲಿನ ಸರ್ಕಾರ ಮುಂದಾಗಿದೆ. ಹೌದು ದೇಶದಲ್ಲಿ ಬುರ್ಖಾ ಸಂಪೂರ್ಣವಾಗಿ ನಿಷೇಧಿಸುವ ಕಾಯ್ದೆ ಜಾರಿಗೆ ಮುಂದಾಗಿದೆ. ಇದಕ್ಕೆ ಪರ ವಿರೋಧ ಚರ್ಚೆಗಳು ಆರಂಭವಾಗಿದೆ. ಮುಸ್ಲಿಂ ಸಮುದಾಯದ ಬಹುತೇಕ ಮಂದಿ ಇದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ಶ್ರೀಲಂಕಾದಲ್ಲಿ ಸಾವಿರಾರು ಮದರಸಾಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಶ್ರೀಲಂಕಾ ಸರ್ಕಾರ ಚಿಂತನೆ ನಡೆಸಿದೆ. ಶೀಗ್ರವೇ ಇದಕ್ಕೆ ಸಂಬಂಧಿಸಿದಂತೆ ಕಾಯ್ದೆಯನ್ನೂ ಜಾರಿಗೆ ತರಲಿದೆ ಎನ್ನಲಾಗಿದೆ. ಇನ್ನೂ ಯಾರು ಬೇಕಾದರೂ ಶಾಲೆಯನ್ನು ತೆರೆದು ಮಕ್ಕಳಿಗೆ ಏನೂ ಬೇಕಾದರೂ ಕಲಿಸಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಣ ನೀತಿಯನ್ನು ಉಲ್ಲಂಘಿಸುತ್ತಿರುವ ಇಸ್ಲಾಮಿಕ್ ಮದರಾಸಗಳನ್ನು ಮುಚ್ಚಲು ನಿರ್ಧರಿಸಿದೆ ಅಲ್ಲಿನ ಸರ್ಕಾರ.
ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಎನ್ ಕೌಂಟರ್ ಸ್ಪೆಷಲಿಸ್ಟ್ ಕೈವಾಡ , ಸಚಿನ್ ವಾಜಿ ಬಂಧನ..!
ಇನ್ನೂ ಇತ್ತೀಚೆಗೆ ಶ್ರೀಲಂಕಾದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗ್ತಿದ್ದು, ಉಗ್ರರು ಬಹುತೇಕ ಬುರ್ಖಾಗಳನ್ನ ಧರಿಸಿ ತಿರುಗಾಡುತ್ತಿದ್ದಾರೆ ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಅದ್ರಲ್ಲೂ 2019ರಲ್ಲಿ ಚರ್ಚ್ ಮೇಲಿನ ಉಗ್ರರ ದಾಳಿಯಲ್ಲಿ 250 ಜನರು ಸಾವನ್ನಪ್ಪಿದ್ದರು. ಈ ಬಳಿಕ ಲಂಕಾದಲ್ಲಿ ಬುರ್ಖಾ ನಿಷೇಧದ ಕೂಗು ಹೆಚ್ಚಾಗಿತ್ತು. ಇದೇ ಹಿನ್ನೆಲೆ ದೇಶದ ಭದ್ರತೆಯ ದೃಷ್ಟಿಯಿಂದ ಶ್ರೀಲಂಕಾ ಸರ್ಕಾರವು ಸಂಪೂರ್ಣವಾಗಿ ಬುರ್ಖಾ ನಿಷೇಧಿಸಕ್ಕೆ ಮುಂದಾಗಿದೆ. ಈ ಕುರಿತ ವಿಧೇಯಕಕ್ಕೆ ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಸೇಖರ್ ಸಹಿ ಹಾಕಿ, ಕ್ಯಾಬಿನೇಟ್ ಅನುಮೋದನೆಗೆ ಕಳುಹಿಸಿದ್ದಾರೆ.