ಸಿಆರ್ಪಿಎಫ್ ಬಂಕರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಖಾಧಾರಿ ಮಹಿಳೆ…
ಸಿಆರ್ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಬಂಕರ್ ಮೇಲೆ ಬುರ್ಖಾಧಾರಿ ಮಹಿಳೆಯೊಬ್ಬರು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಸೋಪೋರ್ನಲ್ಲಿ ನಡೆದಿದೆ.
#WATCH Bomb hurled at CRPF bunker by a burqa-clad woman in Sopore yesterday#Jammu&Kashmir
(Video source: CRPF) pic.twitter.com/Pbqtpcu2HY
— ANI (@ANI) March 30, 2022
ಮಹಿಳೆ ತನ್ನ ಬ್ಯಾಗ್ ನಿಂದ ಪೆಟ್ರೋಲ್ ಬಾಂಬ್ ತೆಗೆದು ಎಸೆಯುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. 20 ಸೆಕೆಂಡುಗಳ ವಿಡೀಯೋ ಕ್ಲಿಪ್ ನಲ್ಲಿ ಬುರ್ಖಾಧಾರಿ ಮಹಿಳೆ ತನ್ನ ಬ್ಯಾಗ್ನಿಂದ ಸ್ಫೋಟಕವನ್ನ ತೆಗೆದು ಬಂಕರ್ಗೆ ಎಸೆಯುವುದು ನೋಡಬಹುದು. ಬಾಂಬ್ ಎಸೆದ ನಂತರ ಪಾದಾಚಾರಿಗಳು ಓಡಿಹೋಗುತ್ತಾರೆ. ಭದ್ರತಾ ಸಿಬ್ಬಂದಿ ತಕ್ಷಣವೇ ಬಕೆಟ್ ನೀರಿನಿಂದ ಬೆಂಕಿಯನ್ನು ನಂದಿಸಲು ಬಂಕರ್ನಿಂದ ಹೊರಬಂದಿದ್ದಾರೆ.
ನಿನ್ನೆ ಸೋಪೋರ್ನಲ್ಲಿ ಸಿಆರ್ಪಿಎಫ್ ಬಂಕರ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಮಹಿಳೆಯನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಆಕೆಯನ್ನು ಬಂಧಿಸುತ್ತೇವೆ ಎಂದು ಐಜಿಪಿ ಕಾಶ್ಮೀರ ವಿಜಯ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Burqa clad woman hurls petrol bomb at CRPF bunker in J-K’s Sopore