ADVERTISEMENT
Monday, January 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಜೈಲಿನಿಂದ ಹೊರಬೀಳುತ್ತಿದ್ದಂತೆಯೇ ಸೀದಾ ಪೊಲೀಸ್ ಸ್ಟೇಷನ್‌ಗೆ! ತಿಮರೋಡಿ ಗ್ಯಾಂಗ್ ವಿರುದ್ಧ ಗುಡುಗಿದ ಬುರುಡೆ ಚಿನ್ನಯ್ಯ

Burude Chinnaiah thunders against Timarodi gang, goes straight to police station as soon as he gets out of jail

Shwetha by Shwetha
December 23, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ದಕ್ಷಿಣ ಕನ್ನಡ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ತಿರುವುಗಳು ಸಿಗುತ್ತಲೇ ಇವೆ. ಈ ಪ್ರಕರಣದಲ್ಲಿ ಆರಂಭದಲ್ಲಿ ಹೀರೋ ಆಗಿ ಬಿಂಬಿತವಾಗಿ, ಸ್ಫೋಟಕ ಮಾಹಿತಿದಾರ ಎಂದು ಕರೆಸಿಕೊಂಡು, ಅಂತಿಮವಾಗಿ ಪ್ರಕರಣದ ಹಾದಿ ತಪ್ಪಿಸಿದ ಆರೋಪದ ಮೇಲೆ ವಿಲನ್ ಆಗಿ ಜೈಲು ಸೇರಿದ್ದ ಕುಖ್ಯಾತ ಬುರುಡೆ ಚಿನ್ನಯ್ಯ ಇದೀಗ ಮತ್ತೆ ಸುದ್ದಿಯ ಮುಂಚೂಣಿಗೆ ಬಂದಿದ್ದಾನೆ. ಜೈಲಿನಿಂದ ಬಿಡುಗಡೆಯಾದ ಕ್ಷಣವೇ ಆತ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಒಂದು ಕಾಲದಲ್ಲಿ ತನಗೆ ಆಶ್ರಯ ನೀಡಿ ಬೆಂಬಲಿಸಿದವರ ವಿರುದ್ಧವೇ ದೂರು ದಾಖಲಿಸುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾನೆ.

ಒಂದಾನೊಂದು ಕಾಲದಲ್ಲಿ ಸೌಜನ್ಯಾ ಪರ ಹೋರಾಟಗಾರರ ಜೊತೆ ಗುರುತಿಸಿಕೊಂಡಿದ್ದ ಚಿನ್ನಯ್ಯ, ಇದೀಗ ಅವರನ್ನೇ ತನ್ನ ಪ್ರಾಣವೈರಿಗಳೆಂದು ಬಿಂಬಿಸಿ ರಕ್ಷಣೆ ಕೋರಿರುವುದು ಪ್ರಕರಣಕ್ಕೆ ವಿಚಿತ್ರ ಟ್ವಿಸ್ಟ್ ನೀಡಿದೆ.

Related posts

ಶ್ರೀ ಯಂತ್ರೋದ್ಧಾರಕ ಹನುಮಾನ್ ಮಹತ್ವ

ಶ್ರೀ ಯಂತ್ರೋದ್ಧಾರಕ ಹನುಮಾನ್ ಮಹತ್ವ

January 18, 2026
ಡಿಕೆಶಿ ವಿದೇಶ ಪ್ರವಾಸ ರದ್ದು ಮಾಡಿದ ರಾಹುಲ್ ಗಾಂಧಿ

ಡಿಕೆಶಿ ವಿದೇಶ ಪ್ರವಾಸ ರದ್ದು ಮಾಡಿದ ರಾಹುಲ್ ಗಾಂಧಿ

January 18, 2026

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯ ಹಾಗೂ ವಂಚನೆ ಆರೋಪದಡಿ ಜೈಲು ಸೇರಿದ್ದ ಸಂತೋಷ್ ರಾವ್ ಅಲಿಯಾಸ್ ಚಿನ್ನಯ್ಯ, ಡಿಸೆಂಬರ್ 18 ರಂದು ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದನು. ಜೈಲಿನಿಂದ ಹೊರಬಂದ ತಕ್ಷಣ ಆತ ನೇರವಾಗಿ ತೆರಳಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಗೆ. ತನ್ನ ಪತ್ನಿ ಮಲ್ಲಿಕಾ ಹಾಗೂ ಸಹೋದರಿ ರತ್ನಾ ಅವರೊಂದಿಗೆ ಠಾಣೆಗೆ ಹಾಜರಾದ ಚಿನ್ನಯ್ಯ, ತನಗೆ ಪ್ರಾಣ ಬೆದರಿಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಆಶ್ರಯದಾತರ ವಿರುದ್ಧವೇ ತಿರುಗಿಬಿದ್ದ ಚಿನ್ನಯ್ಯ

ವಿಚಿತ್ರವೆಂದರೆ, ಚಿನ್ನಯ್ಯ ಯಾರ ವಿರುದ್ಧ ದೂರು ನೀಡಿದ್ದಾನೋ, ಅವರೆಲ್ಲರೂ ಒದೊಂದು ಕಾಲದಲ್ಲಿ ಸೌಜನ್ಯಾ ನ್ಯಾಯಕ್ಕಾಗಿ ಹೋರಾಡುತ್ತಿರುವ ಪ್ರಮುಖರು ಹಾಗೂ ಚಿನ್ನಯ್ಯನಿಗೆ ಆಶ್ರಯ ನೀಡಿದವರು ಎಂದು ಹೇಳಲಾಗಿತ್ತು. ತನ್ನ ದೂರಿನಲ್ಲಿ ಚಿನ್ನಯ್ಯ, ಸೌಜನ್ಯಾ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ಯೂಟ್ಯೂಬರ್ ಸಮೀರ್ ಎಂ.ಡಿ. ಹಾಗೂ ಸೌಜನ್ಯಾಳ ಮಾವ ವಿಠಲ ಗೌಡ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದಾನೆ.

ಈ ವ್ಯಕ್ತಿಗಳು ಹಾಗೂ ಇವರ ಸಂಗಡಿಗರಿಂದ ತನಗೆ ಮತ್ತು ತನ್ನ ಕುಟುಂಬಕ್ಕೆ ಜೀವಬೆದರಿಕೆ ಇದೆ. ಯಾವುದೇ ಕ್ಷಣದಲ್ಲಿ ನಮ್ಮ ಮೇಲೆ ಹಲ್ಲೆ ನಡೆಯಬಹುದು ಅಥವಾ ನಮ್ಮ ಪ್ರಾಣಕ್ಕೆ ಅಪಾಯ ಎದುರಾಗಬಹುದು. ಆದ್ದರಿಂದ ತಮಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಮತ್ತು ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿನ್ನಯ್ಯ ಪೊಲೀಸರನ್ನು ಒತ್ತಾಯಿಸಿದ್ದಾನೆ.

ಈ ಬೆಳವಣಿಗೆಯ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ ಪೊಲೀಸರು ಚಿನ್ನಯ್ಯ ನೀಡಿದ ದೂರನ್ನು ಸ್ವೀಕರಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಲಾದ ಅಂಶಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿದಾರನಾಗಲು ಬಂದು, ಬಳಿಕ ಆರೋಪಿ ಸ್ಥಾನದಲ್ಲಿ ನಿಂತು, ಇದೀಗ ದೂರುದಾರನಾಗಿ ಬದಲಾಗಿರುವ ಚಿನ್ನಯ್ಯನ ಈ ನಡೆ ಭಾರೀ ಕುತೂಹಲ ಮೂಡಿಸಿದೆ. ಹೋರಾಟಗಾರರ ಪಾಳೆಯದಲ್ಲಿ ಗುರುತಿಸಿಕೊಂಡಿದ್ದವನು ಇದೀಗ ಅವರ ವಿರುದ್ಧವೇ ತೊಡೆತಟ್ಟಿರುವುದು ಸೌಜನ್ಯಾ ಪ್ರಕರಣದ ಹೋರಾಟದ ಹಾದಿಯಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ShareTweetSendShare
Join us on:

Related Posts

ಶ್ರೀ ಯಂತ್ರೋದ್ಧಾರಕ ಹನುಮಾನ್ ಮಹತ್ವ

ಶ್ರೀ ಯಂತ್ರೋದ್ಧಾರಕ ಹನುಮಾನ್ ಮಹತ್ವ

by admin
January 18, 2026
0

ಶ್ರೀ ಚಂದ್ರಿಕಾರಾಯರು 3 ಕೋಟಿ ಜಪಗಳನ್ನು ಮಾಡಿ ಪ್ರತಿ ಪ್ರಾಣದೇವರ ಪ್ರತಿಷ್ಠೆ ಮಾಡುತ್ತಿದ್ದರು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ...

ಡಿಕೆಶಿ ವಿದೇಶ ಪ್ರವಾಸ ರದ್ದು ಮಾಡಿದ ರಾಹುಲ್ ಗಾಂಧಿ

ಡಿಕೆಶಿ ವಿದೇಶ ಪ್ರವಾಸ ರದ್ದು ಮಾಡಿದ ರಾಹುಲ್ ಗಾಂಧಿ

by Shwetha
January 18, 2026
0

ಕಾಂಗ್ರೆಸ್ ಪಕ್ಷದ ಚುನಾವಣಾ ಸಿದ್ಧತೆಗಳ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ವಿದೇಶ ಪ್ರವಾಸವನ್ನು ರದ್ದುಪಡಿಸಲಾಗಿದೆ. ದಾವೋಸ್‌ಗೆ ತೆರಳುವ ಅಗತ್ಯವಿಲ್ಲ, ಬದಲಾಗಿ ಚುನಾವಣಾ ಕೆಲಸಗಳ ಮೇಲೆ ಸಂಪೂರ್ಣ...

ಈ ಪ್ರಭಾವಿ ಸಚಿವರ ಮೂಲಕ ಸಂದೇಶ ರವಾನಿಸಿದ್ರಾ ಸಿಎಂ?

ಈ ಪ್ರಭಾವಿ ಸಚಿವರ ಮೂಲಕ ಸಂದೇಶ ರವಾನಿಸಿದ್ರಾ ಸಿಎಂ?

by Shwetha
January 18, 2026
0

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತೀವ್ರವಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆಯೇ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ....

ಪುರುಷರಿಗೂ ಉಚಿತ ಬಸ್ ಘೋಷಣೆ: ಅಣ್ಣಾ ಡಿಎಂಕೆ ಮೊದಲ ಹಂತದ ಪ್ರಣಾಳಿಕೆ ಪ್ರಕಟ

ಪುರುಷರಿಗೂ ಉಚಿತ ಬಸ್ ಘೋಷಣೆ: ಅಣ್ಣಾ ಡಿಎಂಕೆ ಮೊದಲ ಹಂತದ ಪ್ರಣಾಳಿಕೆ ಪ್ರಕಟ

by Shwetha
January 18, 2026
0

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ವಿರೋಧ ಪಕ್ಷವಾದ ಅಣ್ಣಾ ಡಿಎಂಕೆ ತನ್ನ ಮೊದಲ ಹಂತದ ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸಿದೆ. ಸಾಮಾನ್ಯ ಜನರಿಗೆ ನೇರ ಲಾಭವಾಗುವ...

CM  ಬದಲಾವಣೆಗೆ ಹೈಕಮಾಂಡ್ ಬ್ರೇಕ್: ಪಂಚರಾಜ್ಯ ಕದನ ಮುಗಿಯುವವರೆಗೂ ಸೈಲೆಂಟಾಗಿರಿ, ಅಸ್ಸಾಂ ಗೆಲ್ಲಿಸಿಕೊಡಿ ಎಂದು ಡಿಕೆಶಿಗೆ ಖಡಕ್ ಸೂಚನೆ

CM ಬದಲಾವಣೆಗೆ ಹೈಕಮಾಂಡ್ ಬ್ರೇಕ್: ಪಂಚರಾಜ್ಯ ಕದನ ಮುಗಿಯುವವರೆಗೂ ಸೈಲೆಂಟಾಗಿರಿ, ಅಸ್ಸಾಂ ಗೆಲ್ಲಿಸಿಕೊಡಿ ಎಂದು ಡಿಕೆಶಿಗೆ ಖಡಕ್ ಸೂಚನೆ

by Shwetha
January 18, 2026
0

ಬೆಂಗಳೂರು: ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ನಾಯಕತ್ವ ಬದಲಾವಣೆಯ ಚರ್ಚೆಗೆ ಕಾಂಗ್ರೆಸ್ ಹೈಕಮಾಂಡ್ ಸದ್ಯದ ಮಟ್ಟಿಗೆ ತೆರೆ ಎಳೆದಿದೆ. ಮುಂಬರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram