ವ್ಯಕ್ತಿಯೊಬ್ಬ 70 ಸಾವಿರ ರೂ ನೀಡಿ ಬಿಹಾರದಿಂದ ಮಹಿಳೆಯೊಬ್ಬರನ್ನು ಖರೀದಿಸಿ ಮದುವೆಯಾಗಿ, ನಂತರ ತಾನೇ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಬಿಹಾರಿ ಮೂಲದವರು ಎನ್ನಲಾದ ಸ್ವೀಟಿ ಎಂಬಾಕೆಯನ್ನು ಧರ್ಮವೀರ್ ಎಂಬುವವರು ಖರೀದಿಸಿ, ಮದುವೆಯಿದ್ದರು. ಆದರೆ, ಸ್ವೀಟಿ ಆಗಾಗ ಮನೆ ಬಿಟ್ಟು ಓಡಿ ಹೋಗುತ್ತಿದ್ದಳು. ಎಲ್ಲಿಗೆ ಹೋಗುತ್ತಿದ್ದೇನೆ? ಯಾವಾಗ ಬರುತ್ತೇನೆ ಎಂಬ ಯಾವ ಮಾಹಿತಿ ನೀಡದಿರುವ ಹಿನ್ನೆಲೆಯಲ್ಲಿ ಧರ್ಮವೀರ್ ಗೆ ಆ ಮಹಿಳೆಯ ಕುರಿತು ತೀವ್ರವಾದ ಅಸಮಾಧಾನವಿತ್ತು. ಹೀಗಾಗಿ ಧರ್ಮವೀರ್ ತನ್ನ ಇಬ್ಬರು ಸಂಬಂಧಿಕರೊಂದಿಗೆ ಸೇರಿ ಸ್ವೀಟಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೇ, ಹರ್ಯಾಣ ಗಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ಆಕೆಯ ಮೃತದೇಹ ಎಸೆದಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.








