BWF Ranking : ಎಂಟನೆ ಸ್ಥಾನಕ್ಕೇರಿದ ಹೆಚ್. ಎಸ್.ಪ್ರಣಯ್
ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣಾಯ್ ಬಿಡಬ್ಲ್ಯುಎಫ್ ರಾಂಕಿಂಗ್ನಲ್ಲಿ 8ನೇ ಸ್ಥಾನ ಪಡೆದಿದ್ದಾರೆ. ಇದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆಯಾಗಿದೆ.
ಮಂಗಳವಾರ ಬಿಡುಗಡೆಗೊಂಡಿರುವ ರಾಂಕಿಂಗ್ನಲ್ಲಿ 30 ವರ್ಷದ ಎಚ್.ಎಸ್.ಪ್ರಣಾಯ್ ಈ ವರ್ಷ ಅದ್ಭುತ ಪ್ರದರ್ಶನದ ಮೂಲಕ ರಾಂಕಿಂಗ್ನಲ್ಲಿ ಏರಿಕೆ ಕಂಡಿದ್ದಾರೆ. 2018ರಲ್ಲೂ ಪ್ರಣಯ್ 8ನೇ ಸ್ಥಾನ ಪಡೆದಿದ್ದರು. ನಂತರ 2019ರಲ್ಲಿ 34ನೇ ಸ್ಥಾನಕ್ಕೆ ಕುಸಿದಿದ್ದರು.
ಥಾಮಸ್ ಕಪ್ ನಲ್ಲಿ ಐತಿಹಾಸಿಕ ಗೆಲುವು.7 ಕ್ವಾರ್ಟರ್ ಫೈನಲ್, 2 ಸೆಮಿಫೈನಲ್, ಮತ್ತು ಸ್ವಿಸ್ ಓಪನ್ನಲ್ಲಿ ರನ್ನರ್ ಅಪ್ ಆಗಿದ್ದಾರೆ.
ವೈಯಕ್ತಿಕವಾಗಿ ಪ್ರಶಸ್ತಿ ಗೆಲ್ಲದಿದ್ದರೂ ಐತಿಹಾಸಿಕ ಥಾಮಸ್ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಸ್ಥಿರ ಪ್ರದರ್ಶನದಿಂದ ಪ್ರಣಯ್ ಬಿಡಬ್ಲ್ಯುಎಫ್ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತು.
ಮತ್ತೋರ್ವು ಯುವ ಆಟಗಾರ ಲಕ್ಷ್ಯ ಸೇನ್ 7ನೇ ಸ್ಥಾನದಲ್ಲೆ ಮುಂದುವರೆದಿದ್ದಾರೆ. ಪುರಷರ ಡಬಲ್ಸ್ ವಿಭಾಗದಲ್ಲಿ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ನಂ.5ರಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಗಾಯದಿಂದ ಹೊರಗುಳಿದಿರುವ ಪಿ.ವಿಸಿಂಧು ಒಂದು ಸ್ಥಾನದಿಂದ ಕುಸಿದು 7ನೇ ಸ್ಥಾನದಲ್ಲಿದ್ದಾರೆ.