ಉಪ ಚುನಾವಣೆ : ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಮಾಹಿತಿ

1 min read
By-Election

ಉಪ ಚುನಾವಣೆ : ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಮಾಹಿತಿ

ಬೆಂಗಳೂರು : ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದ್ದು, ಏಪ್ರಿಲ್ 17 ರಂದು ಮತದಾನ ನಡೆಯಲಿದೆ.

ಏಪ್ರಿಲ್ 17 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.

ಈ ಉಪಚುನಾವಣೆ ಕಾಂಗ್ರೆಸ್ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ. ಅದರಲ್ಲೂ ಕಳೆದ ಉಪಚುನಾವಣೆಯಲ್ಲಿ ಸೋಲುಂಡಿರುವ ಕಾಂಗ್ರೆಸ್ ಈ ಬಾರಿ ಆಡಳಿತರೂಢ ಪಕ್ಷಕ್ಕೆ ಟಕ್ಕರ್ ನೀಡಲೇಬೇಕೆಂಬ ಹಠದೊಂದಿಗೆ ರಣತಂತ್ರಗಳನ್ನ ರೂಪಿಸುತ್ತಿದೆ. ಇತ್ತ ಬಿಜೆಪಿಗೆ ಕೂಡ ಈ ಚುನಾವಣೆ ಮಹತ್ತರದಾಗಿದೆ. ಸರ್ಕಾರದ ಮೇಲೆ ಸರಣಿ ಆರೋಪಗಳು ಬರುತ್ತಿದ್ದು, ಈ ಚುನಾವಣೆಯಲ್ಲಿ ಗೆಲ್ಲುವುದರ ಮೂಲಕ ಜನ ನಮ್ಮ ಪರ ಇದ್ದಾರೆ ಅನ್ನೋದ ಬಿಜೆಪಿ ಎದುರಾಳಿಗಳಿಗೆ ತೋರಿಸಬೇಕಿದೆ.

By-Election

ಸಂಭಾವ್ಯ ಅಭ್ಯರ್ಥಿಗಳು:

ಬೆಳಗಾವಿಯಲ್ಲಿ ಬಿಜೆಪಿಯಿಂದ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್, ಡಾ. ರವಿ ಪಾಟೀಲ್, ಪ್ರಭಾಕರ ಕೋರೆ, ರಮೇಶ್ ಕತ್ತಿ ಕಣಕ್ಕಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಸತೀಶ್ ಜಾರಕಿಹೊಳಿ ಅಥವಾ ಪ್ರಕಾಶ್ ಹುಕ್ಕೇರಿ ಕಣಕ್ಕಿಳಿಯಬಹುದು.

ಬಸವಕಲ್ಯಾಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ ವಿಜಯೇಂದ್ರ ಅವರು ಕಣಕ್ಕಿಳಿಯಲಿದ್ದಾರೆ ಅನ್ನೋ ಮಾತುಗಳ ಕೇಳಿಬರುತ್ತಿದೆ. ಇವರಲ್ಲದೆ ಮಲ್ಲಿಕಾರ್ಜುನ ಖೂಬಾ, ಶರಣು ಸಲಗಾರ, ಪ್ರದೀಪ ಕೂಡ ರೇಸ್ ನಲ್ಲಿದ್ದಾರೆ. ಕಾಂಗ್ರೆಸ್ ನಿಂದ ವಿಜಯಸಿಂಗ್ ಅಥವಾ ಮಲ್ಲಮ್ಮ ನಾರಾಯಣರಾವ್ ಕಣಕ್ಕಿಳಿಯಬಹುದು.

ಇನ್ನ ಮಸ್ಕಿ ಅಖಾಡಕ್ಕೆ ಪ್ರತಾಪ್ ಗೌಡ ಬಿಜೆಪಿಯಿಂದ ಸ್ಪರ್ಧಿಸುವುದು ಪಕ್ಕಾ. ಕಾಂಗ್ರೆಸ್ ಪಕ್ಷದಿಂದ ಬಸವನಗೌಡ ತುರವಿಹಾಳ ಕಣಕ್ಕಿಳಿಯುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd