ಬೈ ಎಲೆಕ್ಷನ್ ಹಣಾಹಣಿ, ಕಾಂಗ್ರೇಸ್ ಬಿಜೆಪಿ ನಡುವೆ ತೀವ್ರ ಪೈಪೋಟಿ
ಭಾರಿ ಕತೂಹಲ ಕೆರಳಿಸಿರುವ ಹಾನಗಲ್ ಮತ್ತು ಸಿಂಧಗಿ ಬೈ ಎಲೆಕ್ಷನ್ ಮತ ಣಿಕೆ ಶುರುವಾಗಿದೆ. ಇಲ್ಲಿಯವೆರೆ ಹಾನಗಲ್ ನಲ್ಲಿ ಕಾಂಗ್ರೇಸ್ ಮುನ್ನಡೆ ಸಾಧಿಸಿದ್ದರೆ ಸಿಂಧಗಿಯಲ್ಲಿ ಬಿಜೆಪಿ ಮುನ್ನಡೆಯನ್ನ ಕಾಣುತ್ತಿದೆ. ಮುಂದಿನ ವಿದಾನಸಭಾ ಎಲೆಕ್ಷನ್ ನ ಮುನ್ಸೂಚನೆ ಎನ್ನುವಂತೆ ಇದನ್ನ ಬಿಂಬಿಸಲಾಗಿದ್ದು ಎಲ್ಲಾ ರಾಜಕೀಯ ನೇತಾರರ ಕಣ್ಣು ಪಲಿತಾಂಶದ ಮೇಲೆ ನೆಟ್ಟಿದೆ.
ಉಪಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಇನ್ನೆರಡು ಗಂಟೆಗಳಲ್ಲಿ ನಿಚ್ಚಳ ಫಲಿತಾಂಶ ಹೊರಬೀಳಲಿದೆ ಎಂದು ಹೇಳಿದರು.
ಸಿಂದಗಿ ಕ್ಷೇತ್ರದಲ್ಲಿ 8 ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು 8 ಸುತ್ತಿನ ಮತ ಎಣಿಕೆಯಲ್ಲಿಯೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಹಾನಗಲ್ ನಲ್ಲಿ ಆರು ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಸಿಂದಗಿ ಹಾಗೂ ಹಾನಗಲ್ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.








