T 20 World Cup | ಸೋಲದ ಪಾಕಿಸ್ತಾನಕ್ಕೆ ನಮಿಬಿಯಾ ಸವಾಲು

1 min read
Pakistan saaksha tv

ಅರ್ಹತಾ ಸುತ್ತಿನಲ್ಲ ನೀಡಿದ ಪ್ರದರ್ಶನದ ಆಧಾರದ ಮೇಲೆ ನಮಿಬಿಯಾ ತಂಡಕ್ಕೆ ಜೈಂಟ್ ಕಿಲ್ಲರ್ಸ್ ಅನ್ನುವ ಪಟ್ಟ ಬಂದಿತ್ತು.

ಆದ್ರೆ ಟೆಸ್ಟ್ ಆಡುವ ದೇಶಗಳ ವಿರುದ್ಧದ ಪಂದ್ಯ ಅಷ್ಟು ಸುಲಭವಲ್ಲ ಅನ್ನುವುದು ನಮಿಬಿಯಾಕ್ಕೆ ಅರ್ಥವಾಗಿದೆ.

ಅಫ್ಘಾನಿಸ್ತಾನದ ವಿರುದ್ಧದ ಸೋಲಿನ ಬಳಿಕ ನಮಬಿಯಾ ಹೊಸ ತಂತ್ರ ಹೆಣೆಯುತ್ತಿದೆ.

ಪಾಕ್ ವಿರುದ್ಧ ಗೆಲುವು ಕಷ್ಟವಾದರೂ ಹೋರಾಟ ಬಿಡಬಾರದು ಅನ್ನುವ ಛಲದಲ್ಲಿದೆ.

ಪಾಕಿಸ್ತಾನ ಟೀಮ್ ಇಂಡಿಯಾ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ಗೆಲುವಿನ ಮೂಲಕ ಸೆಮಿಫೈನಲ್ ಜಾಗ ಗಟ್ಟಿಮಾಡಿಕೊಂಡಿದೆ.

ಬಾಬರ್ ಅಜಮ್, ರಿಜ್ವಾನ್, ಜಮಾನ್, ಹಫೀಜ್, ಮಲಿಕ್, ಅಸೀಫ್ ಅಲಿ ಎಲ್ಲರೂ ಬೊಂಬಾಟ್ ಬ್ಯಾಟಿಂಗ್ ಮಾಡ್ತಿದ್ದಾರೆ.

Pakistan saaksha tv

ಶಹೀನ್ ಅಫ್ರಿಧಿ, ರೌಫ್, ಮತ್ತು ಹಸನ್ ಅಲಿ ವೇಗದ ಬೌಲಿಂಗ್ ಸೂಪರ್ ಆಗಿದೆ. ಇಮಾದ್ ಮತ್ತು ಶದಾಬ್ ಸ್ಪಿನ್ ಜೋಡಿ ತಂಡದ ಬೌಲಿಂಗ್ ಶಕ್ತಿಯನ್ನು ಹೆಚ್ಚಿಸಿದೆ.

ಇನ್ನು ನಮಿಬಿಯಾ ಸಾಂಘೀಕ ಪ್ರದರ್ಶನ ನೀಡುತ್ತಿದೆ. ಆದರೆ ಬಲಿಷ್ಠ ತಂಡಗಳ ಎದುರು ಆಡುವ ಅನುಭವವೇ ಬೇರೆಯಾಗಿದೆ.

ಈಗಾಗಲೇ ಟಿ20 ವಿಶ್ವಕಪ್ನಲ್ಲಿ ದೊಡ್ಡ ಸಾಧನೆ ಮಾಡಿರುವ ನಮಿಬಿಯಾಕ್ಕೆ ಪಾಕ್ ವಿರುದ್ಧದ ಪಂದ್ಯ ಇನ್ನೊಂದು ದೊಡ್ಡ ಸವಾಲು.

ಅಬುಧಾಭಿಯಲ್ಲಿ ಪಾಕ್ ಸವಾಲಿಗೆ ನಮಿಬಿಯಾ ಹೇಗೆ ಉತ್ತರಿಸುತ್ತೆ ಅನ್ನುವುದು ಕುತೂಹಲಕಾರಿಯಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd