ಹೊಸ ಗೌಪ್ಯತಾ ನೀತಿ ಘೋಷಣೆ ಬಳಿಕ ವ್ಯಾಟ್ಸ್ಆಪ್ ಗೆ ಗುಡ್ ಬೈ ಹೇಳಿದವರೆಷ್ಟು ಗೊತ್ತಾ..!
ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ಮೆಸಂಜರ್ ಆಪ್ ಆಗಿದ್ದ ವಾಟ್ಸಾಪ್ ನಲ್ಲಿ ಇತ್ತೀಚೆಗೆ ಕೆಲ ಹೊಸ ಗೌಪ್ಯತಾ ನೀತಿಯನ್ನು ಹೊರತರರಲಾಗಿತ್ತು. ಇದ್ರಿಂದಾಗಿ ವಾಟ್ಸಾಪ್ ನಮ್ಮ ಗೌಪ್ಯ ಮಾಹಿತಿಯನ್ನ ಸುಲಭವಾಗಿ ಪಡೆಯಲಿದೆ. ಹಾಗೇ ಇದು ಖಾಸಗಿ ಮಾಹಿತಿಯನ್ನ ಸಹ ಪಡೆಯಬಲ್ಲದು. ಇದು ಸುರಕ್ಷಿತವಲ್ಲ ಎಂಬ ಚರ್ಚೆಗಳು ವ್ಯಾಪಕವಾದ ಬಳಿಕ ವಾಟ್ಸ್ ಆಪ್ ವಿರುದ್ಧ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಅನೇಕರು ವಾಟ್ಸ್ ಆಪ್ ಗೆ ಗುಡ್ ಬೈ ಹೇಳಿ ಹೋಗಿದ್ದಾರೆ. ಹೀಗೆ ವಾಟ್ಸ್ ಆಪ್ ಸಹವಾಸ ಬೇಡ ಅಂತ ಹೋದವರೆಲ್ಲಾ ಹಾಗಾದ್ರೆ ಎಲ್ಲಿಗೆ ಹೋಗ್ತಿದ್ದಾರೆ. ಈ ಪ್ರಶ್ನೆಗೆ ಉತ್ತರ ವಾಟ್ಸಾಪ್ ಫೀಚರ್ಸ್ ಅನ್ನೇ ಹೋಲುವ ಸಿಗ್ನಲ್ ಆಪ್ ಗಳಿಗೆ ಜನ ವಾಲಿದ್ದಾರೆ. ಇತ್ತ ಟೆಲಿಗ್ರಾಮ್ ಕಡೆಗೂ ಮುಖಮಾಡಿದ್ದಾರೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ತಮ್ಮ ಗೌಪ್ಯ ಮಾಹಿತಿ ಅಪಾಯದಲ್ಲಿದೆ ಎಂಬ ಆತಂಕದಿಂದ ಬಳಕೆದಾರರು ಬೇರೆ ಕಡೆ ಗಮನಹರಿಸಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚಿಗೆ ವಾಟ್ಸ್ಆಯಪ್ ಸ್ವತಃ ಸ್ಟೇಟಸ್ ಹಾಕಿ ನಿಮ್ಮ ಗೌಪ್ಯತೆಗೆ ನಾವು ಬದ್ಧ ಎಂದು ಹೇಳಿತ್ತು. ಅಲ್ದೇ ಈ ಹೊಸ ಅಪ್ಡೇಟ್ ಪ್ರಕ್ರಿಯೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮಾರ್ಚ್ ಗೆ ಮುಂದೂಡಿದೆ. ಇಷ್ಟಾದ್ರೂ ಅನೇಕರು ಈಗಾಗಲೇ ವಾಟ್ಸಾಪ್ ಸಹವಾಸ ಬೇಡವೇ ಬೇಡ ಅಂತ ಗುಡ್ ಬೈ ಹೇಳಿದ್ದಾರೆ.
ಹಾಗಾದ್ರೆ ಭಾರತದಲ್ಲಿ ಎಷ್ಟು ಮಂದಿ ವಾಟ್ಸ್ಆಪ್ ಡಿಲೀಟ್ ಮಾಡಿದ್ದಾರೆ ಎಂಬುದರ ಸಮೀಕ್ಷೆಯು ಸಹ ನಡೆದಿದೆ.
ಆನ್ಲೈನ್ ಮೂಲಕ ನಡೆದ ಈ ಸರ್ವೆಯಲ್ಲಿ ದೇಶಾದ್ಯಂತ ಸುಮಾರು ಸಾವಿರಾರು ಜನರು ಬಾಗಿಯಾಗಿದ್ದರು. ವರದದಿ ಪ್ರಕಾರ ಈವರೆಗೂ ಕೇವಲ ಶೇ. 5 ರಷ್ಟು ಭಾರತೀಯರು ಆಪ್ ಡಿಲೀಟ್ ಮಾಡಿರುವುದು ಬೆಳಕಿಗೆ ಬಂದಿದೆ. ಭಾರತದಲ್ಲಿ ಒಟ್ಟು 40 ಕೋಟಿ ವಾಟ್ಸ್ ಆಪ್ ಬಳಕೆದಾರರಿದ್ದಾರೆ. ಸುಮಾರು 2 ಕೋಟಿ ಮಂದಿ ವಾಟ್ಸ್ಆಪ್ ಖಾತೆಯನ್ನು ಡಿಲೀಟ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಇಷ್ಟೇ ಅಲ್ಲದೆ, ಶೇ. 21 ಮಂದಿ ವಾಟ್ಸ್ಆಪ್ ಬಳಕೆಯನ್ನು ತಗ್ಗಿಸಿ, ಸಿಗ್ನಲ್ ಮತ್ತು ಟೆಲಿಗ್ರಾಮ್ ಆಪ್ಗಳನ್ನು ಬಳಸುತ್ತಿದ್ದಾರೆ. ಶೇ. 22 ರಷ್ಟು ಮಂದಿ ವಾಟ್ಸ್ಆಪ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಆದರೆ, ತಮ್ಮ ಖಾತೆಯನ್ನು ಡಿಲೀಟ್ ಮಾಡಿಲ್ಲ ಎಂದು ವರದಿಯಾಗಿದೆ.
ಇನ್ನೂ ಟೆಲಿಗ್ರಾಮ್ ಸಿಗ್ನಲ್ ಗೆ ಆಕ್ಟೀವ್ ಯೂಸರ್ಸ್ ಮಿಲಿಯನ್ ಗಟ್ಟಲೇ ಹೆಚ್ಚಾಗ್ತಾ ಇದ್ದಾರೆ. ಇನ್ನೂ ಕೇವಲ 72 ಗಂಟೆಯಲ್ಲೇ ಟೆಲಿಗ್ರಾಮ್ ಗೆ 25 ಮಿಲಿಯನ್ ಜನರು ಸೇರಿದ್ದಾರೆ. ಒಟ್ಟಾರೆ ವಾಟ್ಸಾಪ್ ನಿಂದ ಹೊರ ಬಂದವರೆಲ್ಲಾ ಇದೀಗ ಟೆಲಿಗ್ರಾಮ ಹಾಗೂ ಸಿಗ್ನಲ್ ಕಡೆ ವಾಲುತ್ತಿದ್ದು, ವಾಟ್ಆಪ್ ಕ್ರಮೇಣ ತನ್ನ ಬಳಕೆದಾರರನ್ನ ಕಳೆದುಕೊಳ್ತಾಯಿದೆ. ಇನ್ನೂ ಹೊಸ ನೀತಿಯನ್ನ ಫೆಬ್ರವರಿ 8 ರಿಂದ ಜಾರಿಗೆ ತರೋ ಯೋಚನೆಯಲ್ಲಿ ವಾಟ್ಸಾಪ್ ಇದ್ದು, ಇನ್ನೂ ಹೆಚ್ಚು ಬಳಕೆದಾರರು ವಾಟ್ಸಾಪ್ ಗೆ ಗುಡ್ ಬೈ ಹೇಳೋ ಚಾನ್ಸಸ್ ಇದೆ..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel