“ಕಾಲಚಕ್ರ ತಿರುಗುತ್ತಿರುತ್ತದೆ” : ಬಿಎಸ್ ವೈ ವಿರುದ್ಧ ಬುಸುಗುಟ್ಟಿದ ರೆಡ್ಡಿ ಬ್ರದರ್
ಬೆಂಗಳೂರು : ಪಕ್ಷ ಬೆಳೆಯಲು ಎಲ್ಲರೂ ಕೂಡ ಸಾಕಷ್ಟು ಕಷ್ಟಪಟ್ಟಿದ್ದಾರೆ. ಹೈಕಮಾಂಡ್ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದೆ.
ಎಲ್ಲರಿಗೂ ಒಳ್ಳೆಯದೇ ಆಗಲಿದೆ ಎಂದು ಪರೋಕ್ಷವಾಗಿ ಸಿಎಂ ಬದಲಾವಣೆಗೆ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಬೆಂಬಲ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರಲ್ಲಿ ನಮ್ಮನ್ನು ಬಳಸಿಕೊಂಡರು ನಂತರ ಕೈಬಿಟ್ಟರು. ಪಕ್ಷಕ್ಕಾಗಿ ನಾನೂ ಕಷ್ಟಪಟ್ಟಿದ್ದೇವೆ.
ನಮಗೆ ಯಾವುದೇ ಸ್ಥಾನಮಾನ ಸಿಗಲಿಲ್ಲ. ನಾವು ಹೋದರೆ ಒಂದು ಸಹಿ ಕೂಡ ಮಾಡಿಕೊಡಲ್ಲ. ಈವರೆಗೆ ನಾನೂ ಎಲ್ಲವನ್ನೂ ಸಹಿಸಿಕೊಂಡಿರುವೆ.
ರಾಜಕೀಯದಲ್ಲಿ ತಾಳಿದವನು ಬಾಳಿಯಾನು. ಕಾಲಚಕ್ರ ಯಾವಾಗಲೂ ತಿರುಗುತ್ತಿರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವೇಳೆ ರಾಮುಲು ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಅವರು, ರಾಮುಲುಗೆ ಸೂಕ್ತ ಸ್ಥಾನಮಾನ ಸಿಗುವ ಸಾಧ್ಯತೆ ಇದೆ.
ಹೈಕಮಾಂಡ್ ಒಂದು ಒಳ್ಳೆ ನಿರ್ಧಾರಕ್ಕೆ ಬಂದಿದೆ. ಏನೇ ಆದರೆ ಒಳ್ಳೆಯದೇ ಆಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.