ಎಕ್ಸಾಂ ಬರೆದಿದ್ದೇವೆ, ರಿಸಲ್ಟ್ ಗೋಸ್ಕರ ಕಾಯ್ತಿದ್ದೇವೆ : ಯೋಗೇಶ್ವರ್ c p yogeshwar
ಬೆಂಗಳೂರು : ಅರುಣ್ ಸಿಂಗ್ ಬಂದಾಗ ನಾವು ಎಕ್ಸಾಂ ಬರೆದಿದ್ದೇವೆ. ರಿಸಲ್ಟ್ ಗೋಸ್ಕರ ಕಾಯ್ತಿದ್ದೇವೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ನಮ್ಮ ನೋವುಗಳನ್ನು ನಾಲ್ಕುಗೋಡೆಗಳ ಮಧ್ಯೆ ಹೇಳಿದ್ದೇವೆ. ನಾವು ಅರುಣ್ ಸಿಂಗ್ ಬಂದಾಗ ಎಕ್ಸಾಂ ಬರೆದಿದ್ದೇವೆ.
ರಿಸಲ್ಟ್ ಗೋಸ್ಕರ ಕಾಯ್ತಿದ್ದೇವೆ. ನಾವು ನಮ್ಮ ನೋವು, ಸಮಸ್ಯೆಗಳನ್ನು ನಾವು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇವೆ, ಅವರು ಇದರ ಬಗ್ಗೆ ನಿರ್ಧಾರ ಮಾಡ್ತಾರೆ.
ನಮ್ಮ ಹಿರಿಯರು ತೀರ್ಮಾನ ಮಾಡ್ತೇವೆ ಅಂದಿದ್ದಾರೆ. ಅವರ ನಿರ್ಧಾರದ ಕಡೆ ನೋಡ್ತಿದ್ದೇವೆ ಎಂದು ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನನಗೆ ಮಾಹಿತಿಯಿಲ್ಲ.
ವೈಯಕ್ತಿವಾಗಿ ಅವರ ಜೊತೆಯಲ್ಲೇ ಇದ್ದೇನೆ. 20 ವರ್ಷಗಳಿಂದಲೂ ಅವರ ಜೊತೆಯಲ್ಲಿದ್ದೇವೆ ಅವರು ರಾಜೀನಾಮೆಯಂತ ಪ್ರಯತ್ನಕ್ಕೆ ಹೋಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.