C T RAVI | ನಮಗೆ ನಮ್ಮ ಮಾತೃಭಾಷೆಯೇ ಶ್ರೇಷ್ಠ
ಚಿಕ್ಕಮಗಳೂರು : ನಮಗೆ ನಮ್ಮ ಮಾತೃಭಾಷೆಯೇ ಶ್ರೇಷ್ಠ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಹಿಂದಿ ರಾಷ್ಟ್ರ ಭಾಷೆ ಎಂಬ ವಿಚಾರವಾಗಿ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವಿನ ಟ್ವೀಟ್ ಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂಬ ಸುದೀಪ್ ಹೇಳಿಕೆಗೆ ಸ್ಯಾಂಡಲ್ ವುಡ್ ಬೆಂಬಲವಾಗಿ ನಿಂತಿದೆ. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕಾರಣಿಗಳು ಸುದೀಪ್ ಮಾತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದರ ಮುಂದುವರೆದ ಭಾಗವಾಗಿ ಸಿ. ಟಿ ರವಿ ಮಾತನಾಡಿದ್ದು, ನಮಗೆ ನಮ್ಮ ಮಾತೃಭಾಷೆಯೇ ಶ್ರೇಷ್ಠ. ಇನ್ನೊಂದು ಭಾಷೆಯನ್ನು ನಾವು ಅತಿಕ್ರಮಿಸುವರಲ್ಲ, ಅವರನ್ನ ಗೌರವಿಸುತ್ತೇವೆ. ನಮ್ಮ ದೇಶದಲ್ಲಿ ಒಂದು ಭಾಷೆ ಇನ್ನೊಂದು ಭಾಷೆಯನ್ನ ಕೊಂದಿಲ್ಲ, ಕೊಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ನಾಶಮಾಡಿ ಬೆಳೆಯುವುದು ಪರಕೀಯರಿಂದ ಬಂದಿರುವ ಮನೋಭಾವನೆಯಾಗಿದೆ. ಶೇಕಡಾ 48 ರಷ್ಟು ನಮ್ಮ ದೇಶದ ಜನರಿಗೆ ಹಿಂದಿ ಮಾತೃಭಾಷೆಯಾಗಿದೆ. ಹೀಗಾಗಿ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬಳಸಿಕೊಳ್ಳಬಹುದು. ಆದರೆ ನಮ್ಮ ಮಾತೃಭಾಷೆಯೇ ನಮಗೆ ಹೆಮ್ಮೆಯ ವಿಷಯ ಎಂದು ಸಿ.ಟಿ.ರವಿ ಹೇಳಿದ್ದಾರೆ. C T RAVI reaction on kiccha sudeep statement