ಚಿಕ್ಕಮಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಸಚಿವ ಸಿ.ಟಿ ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ ಎಂಬ ಸುದ್ದಿ ಭಾರಿ ಚರ್ಚೆ ಆಗುತ್ತಿದೆ.
ಈಗಾಗಲೇ ನಾನೂ ರಾಜೀನಾಮೆ ಲೆಟರ್ ಅನ್ನು ಟೈಪ್ ಮಾಡಿ ಇಟ್ಟಿದ್ದೇನೆ ಎಂದಿದ್ದ ಸಚಿವ ಸಿ.ಟಿ.ರವಿ ಈಗ ಉಲ್ಟಾ ಹೊಡೆದಂತಿದೆ.
ಅಲ್ಲದೆ ರಾಜೀನಾಮೆ ಬಗ್ಗೆ ಮಾತನಾಡುತ್ತ ’75 ವರ್ಷ ದಾಟಿದವರು ಅಧಿಕಾರ ರಾಜಕೀಯದಿಂದ ನಿವೃತ್ತಿ ಹೊಂದಬೇಕು ಅನ್ನೋ ನಿಯಮವಿದೆ.
ಅದನ್ನ ವರಿಷ್ಟರೇ ಉಲ್ಲಂಘಿಸಿದ್ದಾರೆ ಎಂದು ಹೇಳುವ ಮೂಲಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ ರವಿ, ಪಕ್ಷದ ಅಲಿಖಿತ ನಿಯಮವನ್ನು ವರಿಷ್ಠರೇ ಬದಲಿಸಿದ್ದಾರೆ. ಅಲಿಖಿತ ನಿಯಮದ ಪ್ರಕಾರ ಒಬ್ಬರಿಗೆ ಒಂದೇ ಹುದ್ದೆ ಎಂಬ ವಾದವಿತ್ತು.
ಅಲ್ಲದೇ 75 ವರ್ಷ ಮೇಲ್ಪಟ್ಟವರು ಅಧಿಕಾರದಿಂದ ನಿವೃತ್ತಿಯಾಗಬೇಕು ಎಂಬ ನಿಯಮವೂ ಇತ್ತು. ಆದರೆ ವರಿಷ್ಠರೇ ನಿಯಮ ಪಾಲಿಸುತ್ತಿಲ್ಲ ಎಂದು ಹೇಳಿದ್ದಾರೆ.
ಅಂದಹಾಗೆ ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರು ಅಧಿಕಾರದಿಂದ ನಿವೃತ್ತಿಯಾಗಬೇಕು ಎಂಬ ನಿಯಮವಿದೆ.
ಬಿಎಸ್ ಯಡಿಯೂರಪ್ಪನವರು 75 ವರ್ಷ ದಾಟಿದರೂ ಇನ್ನೂ ಅಧಿಕಾರದಲ್ಲಿದ್ದಾರೆ. ಬಹುಶಃ ಸಚಿವ ಸಿ.ಟಿ.ರವಿ ಇದೇ ವಿಚಾರವಾಗಿ ಬಿಎಸ್ ವೈಗೆ ಟಾಂಗ್ ನೀಡಿದ್ದಾರೆ ಎನ್ನಲಾಗುತ್ತಿದೆ.