ADVERTISEMENT
Sunday, February 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಂಪುಟ ವಿಸ್ತರಣೆಯೋ.. ಸಂಕಟ ವಿಸ್ತರಣೆವೋ!

admin by admin
February 9, 2020
in Newsbeat, Samagra karnataka
b s yadiyurappa
Share on FacebookShare on TwitterShare on WhatsappShare on Telegram

ಸಂಪುಟ ವಿಸ್ತರಣೆಯೋ.. ಸಂಕಟ ವಿಸ್ತರಣೆವೋ!
ಸಂಪುಟ ವಿಸ್ತರಣೆ ಓಕೆ, ಸಂಕಟ ವಿಸ್ತರಣೆ ಏಕೆ?

ರಾಜ್ಯ ಸಂಪುಟ ವಿಸ್ತರಣೆ ಸರ್ಕಸ್ ಗೆ ಕೊನೆಗೂ ಬ್ರೇಕ್ ಬಿದ್ದಿದ್ದು, ನೂತನ ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಷ್ಟುದಿನ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡಿದ್ದ ಸಿಎಂ,, ಅಂತು ಇಂತು ಇಂದು ತಮ್ಮ ಮಾತನ್ನು ಸ್ವಲ್ಪತಡವಾದ್ರೂ ಉಳಿಸಿಕೊಂಡಿದ್ದಾರೆ. ಆದ್ರೆ ಈಗ ಬಿಎಸ್ ವೈ ಅವರಿಗೆ ಖಾತೆ ಹಂಚಿಕೆ ಸಂಕಟ ಎದುರಾಗುವ ಎಲ್ಲಾ ಲಕ್ಷಗಳಿವೆ. ಏಕೆಂದ್ರೆ ಬೃಹತ್ ನೀರಾವರಿ ಖಾತೆ ಮೇಲೆ ರಮೇಶ್ ಜಾರಕಿಹೊಳಿ ಕಣ್ಣಿಟ್ಟಿದ್ದರೆ ಗೃಹ ಖಾತೆಯನ್ನು ತಮಗೆ ನೀಡಬೇಕೆಂದು ಬಿ.ಸಿ.ಪಾಟೀಲ್ ಬೇಡಿಕೆ ಇಟ್ಟಿದ್ದಾರೆ.
ಮತ್ತೊಂದೆಡೆ ಲೋಕೋಪಯೋಗಿ ಇಲ್ಲವೇ ಇಂಧನ ಖಾತೆ ನೀಡುವಂತೆ ಆನಂದ್ ಸಿಂಗ್. ಚಿಕ್ಕಬಳ್ಳಾಪುರದಿಂದ ಗೆದ್ದು ಮೊದಲ ಬಾರಿಗೆ ಸಚಿವರಾಗಿರುವ ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಖಾತೆ. ಯಶವಂತಪುರದ ಎಸ್.ಟಿ.ಸೋಮಶೇಖರ್ ಬೆಂಗಳೂರು ನಗರಾಭಿವೃದ್ದಿ, ಕೆ.ಆರ್.ಪೇಟೆಯ ಕೆ.ಸಿ.ನಾರಾಯಣಗೌಡ ಸಣ್ಣ ನೀರಾವರಿ, ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಕೃಷಿ, ಕೆ.ಗೋಪಾಲಯ್ಯ ಕೂಡ ಬಿಡಿಎ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಅವರ ಮನವೊಲಿಸಿ ಖಾತೆ ಹಂಚಿಕೆ ಮಾಡಬೇಕಾದ ಅನಿವಾರ್ಯತೆ ಸಿಎಂ ಅವರದ್ದಾಗಿದೆ. ಇದು ಬಿಎಸ್ ವೈ ಅವರಿಗೆ ಕಬ್ಬಿಣದ ಕಡಲೆ ಆಗುವ ಸಾಧ್ಯತೆಗಳಿವೆ..

Related posts

The knowledge learned through the Guru is the tool for everything - until one becomes the slave of the Guru Doreyadanna Mukuti

ಗುರು ಮುಖೇನ ಕಲಿತ ಜ್ಞಾನ ಸಕಲಕ್ಕೂ ಸಾಧನ-ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

February 1, 2026
ಸಿಜೆ ರಾಯ್ ಸಾವು ಪ್ರಕರಣ: ಸಿಐಡಿಗೆ ತನಿಖೆ ವರ್ಗಾವಣೆ ಸಾಧ್ಯತೆ

ಸಿಜೆ ರಾಯ್ ಸಾವು ಪ್ರಕರಣ: ಸಿಐಡಿಗೆ ತನಿಖೆ ವರ್ಗಾವಣೆ ಸಾಧ್ಯತೆ

February 1, 2026

ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿಗೆ ನೀರಾವರಿ ಖಾತೆ ನೀಡಲು ಬಿಜೆಪಿ ವರಿಷ್ಠರಿಗೆ ಸುತಾರಾಂ ಇಷ್ಟವಿಲ್ಲವಂತೆ. ಇದೊಂದು ಪ್ರಮುಖ ಖಾತೆಯಾಗಿದ್ದು, ನೀರಾವರಿ ಇಲಾಖೆ ನಿಭಾಯಿಸಲು ವೈಯಕ್ತಿಕವಾಗಿ ಸಾಕಷ್ಟು ಜ್ಞಾನ ಸಂಪಾದಿಸಿರಬೇಕು. ರಮೇಶ್ ಜಾರಕಿಹೊಳಿಗೆ ಇದನ್ನು ನಿರ್ವಹಣೆ ಮಾಡಲು ಸಾದ್ಯವಿಲ್ಲ ಎಂಬ ಮಾತು ಕೇಳಿಬರುತ್ತಿದ್ದು, ನೀರಾವರಿ ಖಾತೆ ಸಿಗುವುದು ಕೊನೆ ಕ್ಷಣದವರೆಗೂ ಖಚಿತವಾಗಿಲ್ಲ ಎನ್ನಲಾಗುತ್ತಿದೆ.

ಇದೇ ರೀತಿ ಮೊದಲ ಬಾರಿಗೆ ಸಚಿವರಾಗಿರುವ ಬಿ.ಸಿ.ಪಾಟೀಲ್‌ಗೆ ಗೃಹ ಖಾತೆ ನೀಡಲು ಯಡಿಯೂರಪ್ಪ ಒಪ್ಪುತ್ತಿಲ್ಲ. ಸರ್ಕಾರದಲ್ಲಿ ಅತ್ಯಂತ ಮಹತ್ವದ ಹುದ್ದೆ ಎನಿಸಿದ ಗೃಹ ಖಾತೆಯನ್ನು ನಿರ್ವಹಿಸಲು ಸಾಕಷ್ಟು ಅನುಭವಿಗಳಾಗಿರಬೇಕು. ಬಿ.ಸಿ.ಪಾಟೀಲ್ ಮೊದಲ ಬಾರಿಗೆ ಸಚಿವರಾಗಿದ್ದು ಅವರಿಗೆ ಆ ಖಾತೆ ನಿರ್ವಹಿಸಲು ಸಾದ್ಯವಿಲ್ಲ ಹೀಗಾಗಿ ಬೇರೊಂದು ಖಾತೆಯನ್ನು ನೀಡುವಂತೆ ವರಿಷ್ಠರು ನಿರ್ದೇಶಿಸಿದ್ದಾರೆ.

ಇನ್ನು ಇದೇ ವಿಚಾರವಾಗಿ ಸಿಎಂ ಯಡಿಯೂರಪ್ಪ ಮುಂದಿನ ವಾರ ದೆಹಲಿಗೆ ತೆರಳಿದ್ದು, ವರಿಷ್ಠರ ಜೊತೆ ಚರ್ಚಿಸಿದ ನಂತರವೇ ಖಾತೆ ಕ್ಯಾತೆ ಬಗೆಹರಿಯಲಿದೆ.
ಮಹೇಶ್ ಎಂ ದಂಡು

Tags: BJPCabinet ExpansionCongress
ShareTweetSendShare
Join us on:

Related Posts

The knowledge learned through the Guru is the tool for everything - until one becomes the slave of the Guru Doreyadanna Mukuti

ಗುರು ಮುಖೇನ ಕಲಿತ ಜ್ಞಾನ ಸಕಲಕ್ಕೂ ಸಾಧನ-ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

by admin
February 1, 2026
0

ಗುರುಮುಖೇನ ಕಲಿತ ವಿದ್ಯೆಯಿಂದ ಜ್ಞಾನ ಲಭ್ಯವಾಗುತ್ತದೆ. ಶ್ರಮ ಪಡದೆ ಪಡೆಯುವ ವಿದ್ಯೆ ಅನರ್ಥಕ್ಕೆ ಕಾರಣ ವಾಗುತ್ತದೆ. ಇದು ಮಹಾಭಾರತದಲ್ಲಿ ಬರುವ ಕಥೆ. ಭಾರದ್ವಾಜ ಮಹರ್ಷಿಗಳಿಗೆ ಒಬ್ಬ ಮಗನಿದ್ದ....

ಸಿಜೆ ರಾಯ್ ಸಾವು ಪ್ರಕರಣ: ಸಿಐಡಿಗೆ ತನಿಖೆ ವರ್ಗಾವಣೆ ಸಾಧ್ಯತೆ

ಸಿಜೆ ರಾಯ್ ಸಾವು ಪ್ರಕರಣ: ಸಿಐಡಿಗೆ ತನಿಖೆ ವರ್ಗಾವಣೆ ಸಾಧ್ಯತೆ

by Shwetha
February 1, 2026
0

ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ್ದ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ...

JEE ಮುಖ್ಯ 2026 ಫಲಿತಾಂಶ ದಿನಾಂಕ ಪ್ರಕಟ: ಫೆ.12ರೊಳಗೆ ರಿಸಲ್ಟ್ ಬಿಡುಗಡೆ

JEE ಮುಖ್ಯ 2026 ಫಲಿತಾಂಶ ದಿನಾಂಕ ಪ್ರಕಟ: ಫೆ.12ರೊಳಗೆ ರಿಸಲ್ಟ್ ಬಿಡುಗಡೆ

by Shwetha
February 1, 2026
0

ಜಂಟಿ ಪ್ರವೇಶ ಪರೀಕ್ಷೆ JEE Main 2026 – ಜನವರಿ ಅವಧಿಯ ಫಲಿತಾಂಶವನ್ನು ಫೆಬ್ರವರಿ 12ರೊಳಗೆ ಪ್ರಕಟಿಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) X ಮೂಲಕ...

ಫೆಬ್ರವರಿ 12ರಂದು ದೇಶವ್ಯಾಪಿ ಬಂದ್: ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ ಸಾಧ್ಯ

ಫೆಬ್ರವರಿ 12ರಂದು ದೇಶವ್ಯಾಪಿ ಬಂದ್: ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ ಸಾಧ್ಯ

by Shwetha
February 1, 2026
0

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು (4 Labour Codes) ರದ್ದುಗೊಳಿಸಬೇಕು ಎಂಬ ಒತ್ತಾಯದೊಂದಿಗೆ ಫೆಬ್ರವರಿ 12ರಂದು ದೇಶವ್ಯಾಪಿ ಮುಷ್ಕರ (Bharat Bandh) ನಡೆಸಲು...

ದಲಿತರ ಧ್ವನಿ ಅಡಗಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಫಲ: ಕಾಂಗ್ರೆಸ್ ಹಿಂದೂ ವಿರೋಧಿ ನೀತಿಗೆ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

ದಲಿತರ ಧ್ವನಿ ಅಡಗಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಫಲ: ಕಾಂಗ್ರೆಸ್ ಹಿಂದೂ ವಿರೋಧಿ ನೀತಿಗೆ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

by Shwetha
February 1, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ದಲಿತರ ಧ್ವನಿಯನ್ನು ಅಡಗಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram