Karnataka | 100ಕ್ಕೆ 100 ಮಂತ್ರಿಯಾಗುವ ವಿಶ್ವಾಸ ವ್ಯಕ್ತಪಡಿಸಿದ ಆರ್.ಶಂಕರ್ cabinet expansion karnataka r. shankar expressed confidence
ಬೆಂಗಳೂರು : ನೂರಕ್ಕೆ ನೂರರಷ್ಟು ನನಗೆ ಭರವಸೆ ಇದೆ. ಮುಂದಿನ ಸಂಪುಟ ವಿಸ್ತರಣೆ ಸಮಯದಲ್ಲಿ ನನ್ನನ್ನೂ ಮಂತ್ರಿ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಶಂಕರ್, ನಾನು ಬಹಳ ತಾಳ್ಮೆಯಿಂದ ಕೇಳಿದ್ದೇನೆ.
ನಾನು ಬಹಳ ವಿಶ್ವಾಸದಿಂದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ. ಸರ್ಕಾರ ರಚನೆ ಆದಾಗ ನಂದೂ ಪ್ರಮುಖ ಪಾತ್ರವಿದೆ.
ಹಿಂದಿನ ಸಿಎಂ ಹೇಗೆ ಹೇಳಿದ್ದಾರೋ ಹಾಗೆ ನಡೆದುಕೊಂಡಿದ್ದೇನೆ. ಈಗಲೂ ಸಿಎಂ ಬೊಮ್ಮಾಯಿ ಹೇಳಿದಂತೆ ನಡೆದುಕೊಳ್ಳುತ್ತಿದ್ದೇನೆ.
ಮುಂದಿನ ಸಂಪುಟ ವಿಸ್ತರಣೆ ಸಮಯದಲ್ಲಿ ನನ್ನನೂ ಮಂತ್ರಿ ಮಾಡ್ತಾರೆ ಅನ್ನೋ ವಿಶ್ವಾಸವಿದೆ ಎಂದಿದ್ದಾರೆ.
100ಕ್ಕೆ 100 ರಷ್ಟು ನನಗೆ ಭರವಸೆ ಇದೆ. ಸಿಎಂ ಒಳ್ಳೆಯದು ಆಗಲಿದೆ ಎಂದು ಹೇಳಿದ್ದಾರೆ. ಮಾತು ಕೊಟ್ಟಂತೆ ನಡೆದುಕೊಳ್ಳುವ ವಿಶ್ವಾಸವಿದೆ. ಹಾಗಾಗಿ ವರಿಷ್ಠರು ಭೇಟಿ ಮಾಡುವ ಪ್ರಮಯ ಸೃಷ್ಟಿ ಆಗಿಲ್ಲ ಎಂದು ಸ್ಪಷ್ಟಪಸಿದರು.