ಬುಧವಾರ ಸಂಪುಟ ರಚನೆ : ಸಿಎಂ ಬೊಮ್ಮಾಯಿ
ನವದೆಹಲಿ : ಇಂದು ಅಥವಾ ನಾಳೆ ಸಚಿವರ ಪಟ್ಟಿ ಅಂತಿಮಗೊಳ್ಳಲಿದೆ. ಬುಧವಾರ ಸಚಿವ ಸಂಪುಟ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಚಿವ ಸಂಪುಟ ರಚನೆ ವಿಚಾರವಾಗಿ ದೆಹಲಿಯಲ್ಲಿ ಮಾನತಾಡಿದ ಬೊಮ್ಮಾಯಿ, ಸಚಿವ ಸಂಪುಟ ವಿಸ್ತರಣೆ ಸಂಬಂಧ ಭಾನುವಾರ ಸಂಜೆ ಸಿಎಂ ಬೊಇಂದು ಅಥವಾ ನಾಳೆ ಸಚಿವರ ಪಟ್ಟಿ ಅಂತಿಮಗೊಳ್ಳಲಿದೆ. ಬುಧವಾರ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ಇಂದು ಸಂಜೆ ಜೆ.ಪಿ.ನಡ್ಡಾ ಅವರ ಭೇಟಿಗಾಗಿ ಸಮಯ ನಿಗದಿಯಾಗಿದೆ. ಸಚಿವ ಸಂಪುಟ ರಚನೆ ಕುರಿತು ಬಿಜೆಪಿ ವರಿಷ್ಠರೊಂದಿಗೆ ಸಮಗ್ರ ಚರ್ಚೆ ನಡೆಸಲಾಗುವುದು. ಹಲವು ಹಂತಗಳಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆ ಅಥವಾ ಒಂದೇ ಬಾರಿ ಸಂಪುಟ ವಿಸ್ತರಿಸಿದರೆ ಸಾಕೇ ಎಂಬುದರ ಕುರಿತಾಗಿಯೂ ಮಾತುಕತೆ ನಡೆಸಲಾಗುವುದು. ಪ್ರಾದೇಶಿಕ, ಸಾಮಾಜಿಕ ಪ್ರಾತಿನಿಧ್ಯದಡಿ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಡಿಸಿಎಂ ಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಎಷ್ಟು ಡಿಸಿಎಂಗಳನ್ನು ಮಾಡಬೇಕೆಂದು ಈ ಸಭೆಯಲ್ಲೇ ನಿರ್ಧರಿಸಲಾಗುವುದು. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಲಾಗುವುದು. ಕ್ಯಾಬಿನೆಟ್ ರಚನೆ ಬಗ್ಗೆ ಇಂದು ನಿರ್ಧಾರವಾಗುವುದು. ಸಚಿವರು ರಾಜ್ಯದ ಜನರ ಸೇವೆ ಮಾಡಬೇಕು ಎಂದು ಹೇಳಿದರು.









