ಬೆಂಗಳೂರು: ದೇಶದಲ್ಲಿ ಕೊರೊನಾಸುರನ ರುದ್ರತಾಂಡವ ಮುಂದುವರಿದಿದೆ. ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ 850ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 64ಕ್ಕೆ ಏರಿದೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕರ್ನಾಟಕ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈಗ ನೇರವಾಗಿ ವೈದ್ಯರ ಜೊತೆಗೆ ಕೊರೊನಾ ಬಗ್ಗೆ ಮಾಹಿತಿ ಪಡೆಯುವ ಸೌಕರ್ಯವನ್ನು ಸರ್ಕಾರ ನೀಡಿದೆ. ರಾಜ್ಯ ಸರ್ಕಾರ ನೂತನ ಸಹಾಯವಾಣಿಯನ್ನು ಆರಂಭಿಸಿದೆ. 9745697456 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ವೈದ್ಯರ ಬಳಿ ನೇರವಾಗಿ ಮಾತನಾಡಹುದಾಗಿದೆ. 9745697456ಗೆ ಕರೆ ಮಾಡಿ ಕೊರೊನಾ ಬಗೆಗಿನ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಕೊರೊನಾ ರೋಗ ಲಕ್ಷಣಗಳು, ಚಿಕಿತ್ಸೆ, ಸರ್ಕಾರದ ಸೌಲಭ್ಯ, ಪರೀಕ್ಷಾ ವಿಧಾನ ಮುಂತಾದವುಗಳ ಬಗ್ಗೆ ನೇರವಾಗಿ ಡಾಕ್ಟರ್ ಜೊತೆ ಚರ್ಚಿಸಬಹುದಾಗಿದೆ.








