ವಿಡಿಯೋ ಕಾನ್ಫರೆನ್ಸ್ ವೇಳೆ ಪೂರ್ತಿ ಬೆತ್ತಲಾಗಿ ಕಾಣಿಸಿಕೊಂಡ ಸಂಸದ..!
ಕೆನಡಾ : ಝೂಮ್ ಕಾನ್ಫರೆನ್ಸ್ ವೇಳೆ ಕೆನಡಾದ ಸಂಸದರು ಮಾಡಿದ ಒಂದು ಎಡವಟ್ಟಿನಿಂದ ತೀವ್ರ ಮುಜುಕರಕ್ಕೀಡಾಗುವಂತಾಗಿದ್ದು, ಇದೀಗ ಪೇಚಿಗೆ ಸಿಲುಕಿದ್ದಾರೆ. ಹೌದು ವರ್ಚುಯಲ್ ಕಾನ್ಫರೆನ್ಸ್ ವೇಳೆ ಸಂಸದರು ಬೆತ್ತಲಾಗಿಯೇ ಕಾಣಿಸಿಕೊಳ್ಳುವ ಮೂಲಕ ತೀವ್ರ ಮುಜುಗರ ಸೃಷ್ಟಿಸಿದ್ದಾರೆ. ಈ ಘಟನೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಬಳಿಕ ಸಂಸದರು ಈ ಬಗ್ಗೆ ಟ್ವೀಟ್ ಮಾಡಿ ಬಹಿರಂಗವಾಗಿ ಕ್ಷಮೆಯಾಚಿಸಿ ಮ್ತೊಮ್ಮೆ ಹೀಗೆ ಆಗಲ್ಲ ಎಮದು ಹೇಳಿಕೊಂಡಿದ್ದಾರೆ. ಲಿಬರಲ್ ಪಕ್ಷದ ಸಂಸದ ವಿಲಿಯಮ್ ಅಮೋಸ್ ಅವರು ಹೌಸ್ ಆಫ್ ಕಾಮನ್ಸ್ನ ಆನ್ಲೈನ್ ಕರೆಯ ವೇಳೆ ಆಕಸ್ಮಿಕವಾಗಿ ಲ್ಯಾಪ್ಟಾಪ್ನ ಕ್ಯಾಮೆರಾ ಆನ್ ಮಾಡಿದ್ದಾರೆ. ತಮ್ಮ ಬೆತ್ತಲೆ ದೇಹ ಎಲ್ಲರೆದುರು ಕಾಣಿಸಿದ್ದನ್ನು ತಿಳಿದು ಗಾಬರಿಯಾದ ಅವರು ಮೊಬೈಲ್ ಫೋನ್ನಿಂದ ತಮ್ಮ ಗುಪ್ತಾಂಗವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದಾರೆ.
ಈ ಬಗ್ಗೆ ಸಂಸದ ವಿಲಿಯಮ್ ಟ್ವೀಟ್ ಮಾಡಿ ಇಂದು ನಾನು ನಿಜಕ್ಕೂ ದುರದೃಷ್ಟಕರ ಪ್ರಮಾದ ಎಸಗಿದ್ದೇನೆ ಮತ್ತು ಅದರಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದೇನೆ. ವಾಯುವಿಹಾರದಿಂದ ಬಂದ ಬಳಿಕ ಕಚೇರಿ ಕೆಲಸದ ಉಡುಪನ್ನು ಬದಲಿಸಿಕೊಳ್ಳುತ್ತಿದ್ದೆ. ಆಗ ನನ್ನ ಕ್ಯಾಮೆರಾ ಆಕಸ್ಮಿಕವಾಗಿ ಆನ್ ಆಗಿತ್ತು. ಸದನದಲ್ಲಿನ ನನ್ನ ಸಹೋದ್ಯೋಗಿಗಳನ್ನು ಇದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ. ಮತ್ತೊಮ್ಮೆ ಆಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಮಹಿಳೆಗೆ ಮತ್ತು ಬರುವ ಪಾನೀಯ ನೀಡಿ ಅತ್ಯಾಚಾರ , ವಿಡಿಯೋ ಸೆರೆ , ಹಣಕ್ಕಾಗಿ ಬ್ಲಾಕ್ ಮೇಲ್..!
ಹುಡುಗರಿಗೂ ಸೇಫ್ಟಿ ಇಲ್ಲ… ಸಲಿಂಗಿ ಕಾಮುಕನ ಟಾರ್ಚರ್ ಗೆ ವ್ಯಕ್ತಿ ಆತ್ಮಹತ್ಯೆ
ದೇಶದಲ್ಲಿ ಕೊರೊನಾ ಬ್ಲಾಸ್ಟ್ – ಒಂದೇ ದಿನ 2.34 ಲಕ್ಷ ಕೇಸ್ ಪತ್ತೆ..!
ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಫೋಟೋಗೆ ಫೋಸ್ ಕೊಟ್ಟಿದ್ದ ಮಹಿಳೆಯರಿಗೆ ದುಬೈನಿಂದ ಬಹಿಷ್ಕಾರ..!
ಕೆಂಪುಕೋಟೆ ಹಿಂಸಾಚಾರ ಪ್ರಕರಣ – ನಟ ದೀಪ್ ಸಿಧುಗೆ ಜಾಮೀನು ಮಂಜೂರು..!