ದೇಶದಲ್ಲಿ ಕೊರೊನಾ ಬ್ಲಾಸ್ಟ್ – ಒಂದೇ ದಿನ 2.34 ಲಕ್ಷ ಕೇಸ್ ಪತ್ತೆ..!
ನವದೆಹಲಿ : ದೇಶದಲ್ಲಿ ಕೊರೊನಾ ಮಾಹಾಮಾರಿ ಅಬ್ಬರಿಸಿದೆ. ಒಂದೇ ದಿನ 2.34 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿವೆ. ದೇಶದಲ್ಲಿ ಸತತ ಮೂರನೇ ದಿನ 2 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೇ ಒಟ್ಟಾರೆ ಸೋಂಕಿತರ ಸಂಖ್ಯೆ 1.45 ಕೋಟಿಗೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2,34,692 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,23,354 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 1,341 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1,75,649ಕ್ಕೆ ಏರಿಕೆಯಾಗಿದೆ.