ಕಾಂಗ್ರೆಸ್‌ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ರಾಜ್ಯಸಭೆಯಲ್ಲಿ ಭಾರತೀಯ ವೈದ್ಯಕೀಯ ಪರಂಪರೆ, ಯೋಗ , ಗೋಮೂತ್ರವನ್ನು ಶ್ಲಾಘಿಸಿದ್ದಾರೆ.
ಆಸ್ಕರ್ ಫೆರ್ನಾಂಡಿಸ್ ಭಾರತೀಯ ವೈದ್ಯಕೀಯ ಪರಂಪರೆ, ಯೋಗ , ಗೋಮೂತ್ರವನ್ನು ಹೊಗಳಿ ಸ್ವಪಕ್ಷೀಯರ ಅಚ್ಚರಿಗೆ ಕಾರಣವಾದದ್ದು ಮಾತ್ರವಲ್ಲ ಮೀರತ್ ಸಮೀಪದ ಆಶ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಗೋಮೂತ್ರ ಕುಡಿದು ಕ್ಯಾನ್ಸರ್ ಗುಣಪಡಿಸಿಕೊಂಡ ಕಥೆಯನ್ನೂ ಹೇಳಿಕೊಂಡಿದ್ದಾರೆ.
ಗೋಮೂತ್ರದ ಕುರಿತು ಮಾತನಾಡಿದಾಗೆಲ್ಲಾ ನನ್ನ ಗೆಳೆಯ ಜೈರಾಂ ರಮೇಶ್ ನನ್ನ ಕಾಲೆಳೆಯುತ್ತಾರೆ ಎಂದು ಹೇಳಿದ ಆಸ್ಕರ್ ಫೆರ್ನಾಂಡಿಸ್ ಭಾರತೀಯ ವೈದ್ಯಕೀಯ ಪದ್ದತಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ನನಗೆ ಮೊಣಕಾಲಿನ ನೋವು ತೀವ್ರವಾಗಿ ಭಾದಿಸಿದಾಗ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ನೀಡಿದ್ದರು. ಆದರೆ ನಾನು ಶಸ್ತ್ರಚಿಕಿತ್ಸೆಯ ಬದಲು ವಜ್ರಾಸನ, ಯೋಗಭ್ಯಾಸ ಮಾಡಲು ಪ್ರಾರಂಭಿಸಿದೆ. ಇದರಿಂದಾಗಿ ಇಂದು ನಾನು ಕುಸ್ತಿ ಮಾಡುವಷ್ಟು ಸಮರ್ಥನಾಗಿದ್ದೇನೆ ಎಂದರು.
ದಿವಂಗತ ಮಾಜಿ ಪ್ರಧಾನಿ ವಾಜಪೇಯಿ ಅವರು ಮೊಣಕಾಸಿನ ಶಸ್ತ್ರಚಿಕಿತ್ಸೆ ಮಾಡಿಸುತ್ತಾರೆ ಎಂದು ಮೊದಲೇ ತಿಳಿದಿದ್ದರೆ ನಾನು ಅವರ ಬಳಿ ಹೋಗಿ ವಜ್ರಾಸನ ಆರಂಭಿಸುವಂತೆ ಕೇಳಿಕೊಳ್ಳುತ್ತಿದ್ದೆ. ಇದರಿಂದ ಅವರು ಖಂಡಿತವಾಗಿ ಗುಣಮುಖರಾಗುತ್ತಿದ್ದರು ಎಂದು ಹೇಳಿದರು.
ಅಮೆರಿಕದಲ್ಲಿ 104 ವರ್ಷ ವಯಸ್ಸಿನವರು, ಯುವಕರನ್ನು ನಾಚಿಸುವಂತೆ ಓಡುತ್ತಾರೆ. ಅವರನ್ನು ನಾನು ಮಾತನಾಡಿಸಿದಾಗ ಯೋಗ ನಮ್ಮ ಸಂಪತ್ತು. ನೀವು ಯೋಗವನ್ನು ಅಭ್ಯಾಸ ಮಾಡಿದರೆ, ನಮ್ಮ ಆರೋಗ್ಯದ ಬಜೆಟ್ ವೆಚ್ಚವನ್ನು ಶೇ. 50ರಷ್ಟು ಕಡಿಮೆ ಮಾಡಬಹುದು. ಇದು ಜೀವನ ವಿಧಾನ. ಭಾರತೀಯ ಔಷಧ ಪದ್ಧತಿ ವೈದ್ಯರ ಬಳಿಗೆ ಹೋಗುವ ಮೊದಲೇ ಸಾಕಷ್ಟು ಪರಿಹಾರ ನೀಡುತ್ತದೆ ಎಂದರು. ಸರ್ಕಾರ ಮಂಡಿಸಿದ ಮಸೂದೆಗಳನ್ನು ಬೆಂಬಲಿಸಿದರೂ ಯೋಗ, ಪ್ರಕೃತಿ ಚಿಕಿತ್ಸೆಯನ್ನು ಕೈಬಿಟ್ಟಿದ್ದಕ್ಕೆ ಆಸ್ಕರ್ ಫೆರ್ನಾಂಡಿಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಆಸ್ಕರ್ ಫೆರ್ನಾಂಡೀಸ್ ವ್ಯಕ್ತಪಡಿಸಿದ ಅಭಿಪ್ರಾಯ ವೈರಲ್ ಆಗಿದ್ದು ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ವ್ಯಕ್ತವಾಗಿವೆ.
ಪಂಚಮಸಾಲಿ ಪ್ರತಿಭಟನೆ ಗಾಯದ ಮೇಲೆ ‘ಉಪ್ಪು’ ಸವರಿದ CM & ಕಿಚ್ಚು ಹೊತ್ತಿಸಿದ ‘ಪರಂ’..!
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪಂಚಮಸಾಲಿ ಲಿಂಗಾಯತ ಸಮುದಾಯದ ಮೇಲಿನ ಲಾಠಿಚಾರ್ಜ್ ಸಂಬಂಧ ಸಮುದಾಯದ ಹೋರಾಟದ ಕಿಚ್ಚು ಜ್ವಾಲಾಮುಖಿಯಾಗಿ ಸರ್ಕಾರದ ಅಡಿಪಾಯಕ್ಕೆ ಬಿಸಿಮುಟ್ಟಿಸತೊಡಗಿದೆ ಈ ಬಗ್ಗೆ ಇನ್...