ಬೆಂಗಳೂರು : ಗಾಂಜಾ ಡ್ರಗ್ ಅಲ್ಲ ಅದೊಂದು ಮೆಡಿಸಿನ್, ಅದನ್ನು ಕಾನೂನು ಬದ್ಧ ಮಾಡಿ ಎಂದು ಯುವನಟ ರಾಕೇಶ್ ಅಡಿಗ ಹೇಳಿದ್ದಾರೆ. ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾದ ನಂಟಿನ ಬಗ್ಗೆ ಮಾಧ್ಯಮ ಸಂಸ್ಥೆಯ ಜೊತೆ ಮಾತನಾಡಿದ ರಾಕೇಶ್, ಗಾಂಜಾ ಬಗ್ಗೆ ಎಲ್ಲರಿಗೂ ತಪ್ಪು ಕಲ್ಪನೆ ಇದೆ. ಗಾಂಜಾ ಡ್ರಗ್ ಅಲ್ಲ, ಅದೊಂದು ಮೆಡಿಸಿನ್ ಆಗಿದ್ದು, ಅದನ್ನು ಕಾನೂನು ಬದ್ಧ ಮಾಡಬೇಕು ಎಂದು ತಿಳಿಸಿದ್ದಾರೆ.
ಡ್ರಗ್ ಇಡೀ ಪ್ರಪಂಚದಲ್ಲೇ ಇದೆ. ಈಗ ಸ್ಯಾಂಡಲ್ ವುಡ್ ನಲ್ಲಿ ಕೆಲವರನ್ನು ಗುರುತಿಸಿ ಅವರನ್ನು ಅಪರಾಧಿಗಳನ್ನಾಗಿ ಮಾಡಬೇಡಿ. ಅವರನ್ನು ಹೊರಗೆ ಇಡುವುದು ಬೇಡ ಎಂದ ರಾಕೇಶ್, ಯಾರು ಅದನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕಿಂತ ಯಾರು ತಂದು ಮಾರುತ್ತಿದ್ದಾರೆ ಅವರನ್ನು ಹಿಡಿದುಕೊಳ್ಳಬೇಕು ಎಂದು ಹೇಳಿದ್ದಾರೆ.
ಇನ್ನು ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ ಗಾಂಜಾವನ್ನು ಡ್ರಗ್ ನಿಂದ ದೂರ ಇಡಬೇಕು. ಗಾಂಜಾ ಒಂದು ಗಿಡ, ಅದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಗಾಂಜಾ ಬಗ್ಗೆ ಮೋದಿಯವರಿಗೂ ಬಹಿರಂಗ ಪತ್ರ ಬರೆಯಲಾಗಿದೆ. ಆಯುಷ್ಮಾನ್ ಇಲಾಖೆಯವರು ಇದರ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ಈ ಹಿಂದೆ ಗಾಂಜಾ ಭಾರತೀಯ ಸಂಸ್ಕøತಿಗೆ ಬೆರೆತು ಹೋಗಿತ್ತು. 1985ರಲ್ಲಿ ಇದು ಬ್ಯಾನ್ ಆಯ್ತು, ಹಾಗಾದರೆ 1985ರವರೆಗೆ ಭಾರತದಲ್ಲಿ ಎಲ್ಲರೂ ಡ್ರಗ್ ಅಡಿಕ್ಟ್ ಆಗಿದ್ರಾ ಎಂದು ರಾಕೇಶ್ ಪ್ರಶ್ನೆ ಮಾಡಿದ್ದಾರೆ.