ವರ್ಕ್ ಲೋಡ್ ಬಗ್ಗೆ ನನಗೆ ಯಾವುದೇ ತೊಂದರೆ ಇಲ್ಲ – ರಿಷಬ್ ಪಂತ್
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ರಿಷಬ್ ಪಂತ್ ಅವರಿಗೆ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ.
ಈಗಾಗಲೇ ಟಿ- 20 ಸರಣಿಯನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾ ಪರ ರಿಷಬ್ ಪಂತ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಆದ್ರೂ ಒತ್ತಡದ ನಡುವೆಯೂ ತಂಡದ ಗೆಲುವಿನಲ್ಲಿ ರಿಷಬ್ ಪಂತ್ ಪ್ರಮುಖ ಪಾತ್ರ ವಹಿಸಿದ್ದರು. ಮೂರನೇ ಟಿ-20 ಪಂದ್ಯದಲ್ಲಿ ರಿಷಬ್ ಪಂತ್ ಗೆ ದೊಡ್ಡ ಮೊತ್ತವನ್ನು ಪೇರಿಸುವ ಅವಕಾಶವಿತ್ತು. ಆದ್ರೆ ಆ ಅವಕಾಶವನ್ನು ರಿಷಬ್ ಸರಿಯಾಗಿ ಬಳಸಿಕೊಳ್ಳಲು ವಿಫಲರಾಗಿದ್ದಾರೆ.
ಇದೀಗ ಟೆಸ್ಟ್ ತಂಡಕ್ಕೆ ವಿಶ್ರಾಂತಿ ನೀಡಿರುವ ಬಗ್ಗೆ ರಿಷಬ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ವರ್ಕ್ ಲೋಡ್ ಜಾಸ್ತಿ ಆಗಿದೆ ಅಂತ ವಿಶ್ರಾಂತಿ ನೀಡಿದ್ದಾರೆ ಅನ್ನೋದನ್ನು ಒಪ್ಪುವುದಿಲ್ಲ. ಹಾಗಂತ ನಾನು ದೂರು ಕೂಡ ನೀಡುವುದಿಲ್ಲ. ಟೀಮ್ ಮ್ಯಾನೇಜ್ ಮೆಂಟ್ ನನಗೆ ವಿಶ್ರಾಂತಿ ನೀಡಿದೆ. ತಂಡದ ಗೆಲುವಿಗಾಗಿ ನಾನು ಶ್ರಮ ಪಡುತ್ತೇನೆ. ಯಾವುದೇ ಹಂತದಲ್ಲೂ ಅಷ್ಟೇ ತಂಡದ ಗೆಲುವಿಗಾಗಿ ಹೋರಾಟ ನಡೆಸುತ್ತೇನೆ. ಇದು ನನ್ನ ಧ್ಯೇಯ ಕೂಡ. ಇದೀಗ ವಿಶ್ರಾಂತಿಯಿಂದ ಹೊರಬಂದು ಮುಂದಿನ ದಕ್ಷಿಣ ಆಫ್ರಿಕಾ ಸರಣಿಯನ್ನು ಎದುರು ನೋಡುತ್ತಿದ್ದೇನೆ ಎಂದು ರಿಷಬ್ ಪಂತ್ ಹೇಳಿದ್ದಾರೆ.
ರಿಷಬ್ ಪಂತ್ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಆದ್ರೆ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಇನ್ನೊಂದೆಡೆ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಟಾಪ್ ಫಾರ್ಮ್ ನಲ್ಲಿರುವ ಕೆ.ಎಲ್. ರಾಹುಲ್, ಇಶಾನ್ ಕಿಶಾನ್, ಸಂಜು ಸಾಮ್ಸನ್, ಭರತ್ ಟೀಮ್ ಇಂಡಿಯಾದ ವಿಕೆಟ್ ಕೀಪಿಂಗ್ ಸ್ಥಾನವನ್ನು ತುಂಬಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಕೆ.ಎಲ್. ರಾಹುಲ್ ಅವರು ಬ್ಯಾಟಿಂಗ್ ಜೊತೆಗೆ ಕೀಪಿಂಗ್ ಮಾಡುವ ಮೂಲಕವೂ ಗಮನ ಸೆಳೆದಿದ್ದಾರೆ. ಹೀಗಾಗಿ ರಿಷಬ್ ಪಂತ್ ತನ್ನ ಸ್ಥಾನವನ್ನು ಟೀಮ್ ಇಂಡಿಯಾದಲ್ಲಿ ಭದ್ರಪಡಿಸಿಕೊಳ್ಳಬೇಕಾದ್ರೆ ಸ್ಥಿರ ಪ್ರದರ್ಶನವನ್ನು ನೀಡಬೇಕಾಗಿದೆ.
ಷೇರು ಮಾರುಕಟ್ಟೆ ವಿಲವಿಲ.. : ₹2.5 ಲಕ್ಷ ಕೋಟಿ ನಷ್ಟ, ಹೂಡಿಕೆದಾರರಿಗೆ ದೊಡ್ಡ ಹೊಡೆತ!
ಷೇರು ಮಾರುಕಟ್ಟೆಗಳಲ್ಲಿ ಇಂದು ಬೃಹತ್ ಮಟ್ಟದ ಆತಂಕ ಎದುರಾಗಿದ್ದು, ಹೂಡಿಕೆದಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ನಿಫ್ಟಿ ಸೂಚ್ಯಂಕವು 24,389 (-156 ಅಂಕಗಳು) ಮತ್ತು ಸೆನ್ಸೆಕ್ಸ್ 80,742 (-540...