ರಾಜಧಾನಿ ಬೆಂಗಳೂರಿಗೆ ಬಿಗಿ ರೂಲ್ಸ್ : ಯಾವುದು ಬಂದ್…?
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಬ್ಬರಿಸಿಬೊಬ್ಬಿರಿಯುತ್ತಿದ್ದು, ಸಿಕ್ಕ ಸಿಕ್ಕವರ ದೇಹಹೊಕ್ಕಿ ಮರಣ ಮೃದಂಗ ಬಾರಿಸುತ್ತಿದೆ.
ನಿನ್ನೆ ಒಂದೇ ದಿನ ನಗರದಲ್ಲಿ 12 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, 60 ಮಂದಿ ಕೊನೆಯುಸಿರೆಳೆದಿದ್ದರು.
ಈ ಹಿನ್ನೆಲೆ ಸರ್ಕಾರ ರಾಜಧಾನಿಗೆ ಲಾಕ್ ಹಾಕಲು ಚಿಂತನೆ ನಡೆಸಿದೆ.
ತಜ್ಞರು ಕೂಡ ಬೆಂಗಳೂರಲ್ಲಿ ಕೊರೊನಾಗೆ ಕಡಿವಾಣ ಈಗ ಹಾಕಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಭಾರಿ ಸಾವು ನೋವುಗಳನ್ನ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಲ್ಲದೆ ನಗರದಲ್ಲಿ ಟಫ್ ರೂಲ್ಸ್ ಜಾರಿ ಅನಿವಾರ್ಯ ಎಂದು ತಿಳಿಸಿದ್ದಾರೆ.
ಅದೇ ರೀತಿ ಸರ್ಕಾರ ಕೂಡ ಇಂದು ಸರ್ವಪಕ್ಷಗಳ ಸಭೆ ನಡೆಸಿ ಬೆಂಗಳೂರು ಲಾಕ್ ಮಾಡುವ ಬಗ್ಗೆ ಚರ್ಚೆ ನಡೆಸಲಿದೆ.
ಮೂಲಗಳ ಪ್ರಕಾರ ನಗರದಲ್ಲಿ ಜಿಮ್, ಮಾಲ್, ಚಿತ್ರಮಂದಿರ, ಪಬ್, ರೆಸ್ಟೋರೆಂಟ್, ಸಿಮ್ಮಿಂಗ್ ಪೂಲ್, ಸಂಪೂರ್ಣವಾಗಿ ಬಂದ್ ಮಾಡುವ ಸಾಧ್ಯತೆಗಳಿವೆ.
ಇದಲ್ಲದೆ ಮಾರ್ಕೆಟ್ ಗಳಲ್ಲಿ ಕಠಿಣ ನಿಯಮಗಳನ್ನ ಜಾರಿ ತರುವ ಸಾಧ್ಯತೆಗಳಿವೆ.
ಕಂಟೈನ್ಮೆಂಟ್ ಝೋನ್ ಗಳ ಮೇಲೆ ನಿಗಾ ವಹಿಸುವುದು ಸೇರಿದಂತೆ ಹಲವು ನಿಯಮಗಳನ್ನ ಜಾರಿ ತರುವ ಸಾಧ್ಯತೆಗಳಿವೆ. ಹಗಲು ಹೊತ್ತಿನಲ್ಲೇ ಕಫ್ರ್ಯೂ ಜಾರಿ ಮಾಡುವ ಸಾಧ್ಯತೆಗಳಿವೆ.










