ಮಡಿಕೇರಿ: ಶಬರಿಮಲೆ (Sabarimala)ಗೆ ತೆರಳುತ್ತಿದ್ದ ಅಯ್ಯಪ್ಪನ ಭಕ್ತರಿಂದ ಕಾರು ಅಪಘಾತವಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಅಲ್ಲದೇ, ಘಟನೆಯಲ್ಲಿ ಮೂವರು ಗಾಯಗೊಂಡಿರುವ ಘಟನ ನಡೆದಿದೆ. ಈ ಘಟನೆ ಅಂಗಮಾಲಿ (Angamaly) ಪೆರುಂಬುರ್ ಹತ್ತಿರ ನಡೆದಿದೆ. ಶಬರಿಮಲೆಯಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಹಾರಂಗಿ ದೊಡ್ಡತ್ತೂರು ನಿವಾಸಿ ರಾಮ ಎಂಬುವವರ ಪುತ್ರ ಚಂದ್ರ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದೆ.
ಲಿಂಗಂ, ಹರೀಶ್ ಹಾಗೂ ಸಂತೋಷ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.