Udupi | ಸಮುದ್ರಕ್ಕೆ ನುಗ್ಗಿದ ಕಾರ್.. ಓರ್ವ ಸಾವು
ಮರದಂತೆ ಸಮುದ್ರಕ್ಕೆ ಉರುಳಿದ ಕಾರು
ಓರ್ವ ಸಾವು, ಮತ್ತೊಬ್ಬರಿಗಾಗಿ ಹುಡುಕಾಟ
ಉಡುಪಿ ಜಿಲ್ಲೆಯ ಬೈಂದೂರು ಬಳಿ ಘಟನೆ
ಹೆದ್ದಾರಿ ಮೇಲಿನಿಂದ ಸಮುದ್ರಕ್ಕೆ ಬಿದ್ದ ಕಾರು
ಉಡುಪಿ : ಹೆದ್ದಾರಿ ಮೇಲಿನಿಂದ ಸಮುದ್ರಕ್ಕೆ ಕಾರೊಂದು ಬಿದ್ದು, ಓರ್ವ ಮೃತಪಟ್ಟು, ಮತ್ತೊಬ್ಬರಿಗಾಗಿ ಹುಡುಕಾಟ ನಡೆಸುತ್ತಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮಾರಸ್ವಾಮಿ ದೇವಸ್ಥಾನ ಬಳಿ ನಡೆದಿದೆ.
ವೀರಜ್ ಆಚಾರ್ಯ ಮೃತ ಯುವಕನಾಗಿದ್ದು, ನಾಪತ್ತೆಯಾಗಿರುವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಕುಂದಾಪುರದ ಕೋಟೇಶ್ವರ ಬಳಿಯಿಂದ ಬೈಂದೂರು ಕಡೆಗೆ ಕಾರು ತೆರಳುತ್ತಿತ್ತು.
ಆಗ ಚಾಲಕನ ನಿಯಂತ್ರಣ ತಪ್ಪಿ ಕಾರು ಸಮುದ್ರಕ್ಕೆ ಕಾರು ಬಿದ್ದಿದೆ.
ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದರೇ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತೊಬ್ಬರು ನಾಪತ್ತೆಯಾಗಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳ ಸಿಬ್ಬಂದಿ ಕಾರನ್ನು ಮೇಲೆತ್ತುವ ಕಾರ್ಯಚರಣೆ ಕೈಗೊಂಡಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.